Mysore
22
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಜಾತಿ ಗಣತಿ ಮರು ಸಮೀಕ್ಷೆ ಸ್ವಾಗತಾರ್ಹ

ಕಳೆದ ಹತ್ತು ವರ್ಷಗಳ ಹಿಂದೆ, ರಾಜ್ಯದಲ್ಲಿ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದ್ದ ಜಾತಿ-ಜನಗಣತಿಯು (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ),  ಪಾರದರ್ಶಕವಾಗಿ ನಡೆದಿಲ್ಲ ಎಂದು ರಾಜ್ಯದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಮುಖ ನಾಯಕರು, ಧಾರ್ಮಿಕ ಮುಖಂಡರು ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಹೈಕಮಾಂಡ್ ಮತೊಮ್ಮೆ ಜಾತಿ ಜನಗಣತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ, ಸಾರ್ವಜನಿಕರಿಗೆ ವಿಶ್ವಾಸವೂ ಹೆಚ್ಚಾಗಬಹುದು. ಈಗ ನಡೆಯುವ ಜಾತಿ ಜನಗಣತಿ ‘ ಪಾರದರ್ಶಕವಾಗಿ’ ಕೂಡಿರಲಿ, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಸಮೀಕ್ಷೆ ನಡೆಯಲಿ.

 – ಬೂಕನಕೆರೆ ವಿಜೇಂದ್ರ , ಕುವೆಂಪುನಗರ ಮೈಸೂರು

Tags:
error: Content is protected !!