Mysore
23
broken clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಸೋಮವಾರಪೇಟೆ| ಭಾರೀ ಮಳೆಗೆ ಭೂಕುಸಿತ: ಅಪಾರ ಪ್ರಮಾಣದ ಕಾಫಿ ಗಿಡಗಳು ನಾಶ

rain (

ಸೋಮವಾರಪೇಟೆ: ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕಳೆದ ಕೆಲ ದಿನದಿಂದ ಸುರಿದ ಭಾರೀ ಮಳೆಗೆ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ ಕಾಫಿ ಗಿಡಗಳು ಹಾನಿಯಾಗಿವೆ.

ಕೂತಿ ಗ್ರಾಮದ ಡಿ.ಕೆ.ಪ್ರಕಾಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ಕಳೆದ ರಾತ್ರಿ ಭೂ ಕುಸಿತ ಉಂಟಾಗಿದೆ. ಕೂತಿ-ಹೊಸೂರು ಹಾಗೂ ಶನಿವಾರಸಂತೆಗೆ ಸಂಪರ್ಕ ಕಲ್ಪಿಸುವ ಬೆಟ್ಟದ ರಸ್ತೆಯಲ್ಲಿ ಭೂಕುಸಿತವಾಗಿದ್ದು ಮಳೆ ಹೀಗೆಯೇ ಮುಂದುವರಿದರೆ ರಸ್ತೆಯೂ ಕುಸಿದು ಸಂಪರ್ಕ ಸ್ಥಗಿತವಾಗಲಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಕರಿಬಸವರಾಜು, ಪ್ರಭಾರ ಸಹಾಯ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ 2018ರಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾದ ಪ್ರದೇಶದ ಸಮೀಪದಲ್ಲೇ ಈ ಭಾರಿಯೂ ಭೂಕುಸಿತ ಕಂಡಿದ್ದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

Tags:
error: Content is protected !!