Mysore
14
overcast clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಟ್ರಾಫಿಕ್‌ ಪೊಲೀಸರ ಯಡವಟ್ಟಿಗೆ ಮಗು ಸಾವು ಪ್ರಕರಣ: ಪೋಷಕರಿಗೆ ಸಾಂತ್ವನ ಹೇಳಿದ ಸಚಿವ ಚಲುವರಾಯಸ್ವಾಮಿ

Minister Cheluvarayaswamy

ಮಂಡ್ಯ: ಟ್ರಾಫಿಕ್‌ ಪೊಲೀಸರ ಯಡವಟ್ಟಿನಿಂದ ಮಗು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಸ್ವಗೃಹಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಸಚಿವ ಚಲುವರಾಯಸ್ವಾಮಿ ಜೊತೆ ಶಾಸಕ ಗಣಿಗ ರವಿಕುಮಾರ್‌ ಅವರು ಸಹ ಮನೆಗೆ ಭೇಟಿ ನೀಡಿ ಮಗುವಿನ ಪೋಷಕರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಚಿವರ ಮುಂದೆ ಪೋಷಕರು ದುಃಖದ ಕೋಡಿ ಹರಿಸಿದರು.

ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪೋಷಕರಿಗೆ ಸಚಿವರು ಹಣದ ಸಹಾಯ ಮಾಡಲು ಮುಂದಾದರು. ಈ ವೇಳೆ ನಿಮ್ಮ ಹಣ ಬೇಡ, ನನಗೆ ನ್ಯಾಯ ಕೊಡಿಸಿ ಎಂದು ಸಚಿವರು ಕೊಟ್ಟ ಹಣದ ನೆರವನ್ನೇ ಹೃತೀಕ್ಷಾ ತಂದೆ ತಿರಸ್ಕರಿಸಿದರು. ಬಳಿಕ ಸಚಿವ ಚಲುವರಾಯಸ್ವಾಮಿ ಅವರು ಕುಟುಂಬಸ್ಥರಿಗೆ ಹಣ ನೀಡಿದರು.

Tags:
error: Content is protected !!