Mysore
17
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಲಷ್ಕರ್‌ ಎ ತೈಬಾ ಸಂಘಟನೆಯ ಟಾಪ್‌ ಉಗ್ರನ ಹತ್ಯೆ

ಇಸ್ಲಾಮಾಬಾದ್:‌ ಭಾರತದಲ್ಲಿ ನಡೆದ ಮೂರು ಪ್ರಮುಖ ಭಯೋತ್ಪಾದಕರ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಲಷ್ಕರ್‌ ಎ ತೈಬಾ ಸಂಘಟನೆಯ ಟಾಪ್‌ ಉಗ್ರನನ್ನು ಸಿಂಧ್‌ ಪ್ರಾಂತ್ಯದಲ್ಲಿ ಹತ್ಯೆ ಮಾಡಲಾಗಿದೆ.

ಸೈಫುಲ್ಲಾ ಅಲಿಯಾಸ್‌ ಖಾಲಿದ್‌ ಎಂಬಾತ ಮೋಸ್ಟ್‌ ವಾಂಟೆಡ್‌ ಆಗಿದ್ದ ಲಷ್ಕರ್‌ ಉಗ್ರನನ್ನು ಸಿಂಧ್‌ ಪ್ರಾಂತ್ಯದ ಬಾದಿನ್‌ ಜಿಲ್ಲೆಯ ಮಟ್ಲಿ ತಾಲ್ಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ.

ಕಳೆದ 2001ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್‌ ಶಿಬಿರದ ಮೇಲಿನ ದಾಳಿ, 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದ್ದ ಗುಂಡಿನ ದಾಳಿ ಹಾಗೂ 2006ರಲ್ಲಿ ನಾಗ್ಪುರದ ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಮೇಲೆ ನಡೆದಿದ್ದ ದಾಳಿಗಳಿಗೆ ಖಾಲಿದ್‌ ಪ್ರಮುಖ ಸಂಚುಕೋರನಾಗಿದ್ದ. 5 ವರ್ಷಗಳ ಅವಧಿಯಲ್ಲಿ ನಡೆದಿದ್ದ ಈ ಮೂರು ದಾಳಿಗಳು ಹಲವಾರು ಜೀವಗಳನ್ನು ಬಲಿ ಪಡೆದಿದ್ದವು.

Tags:
error: Content is protected !!