ಮೈಸೂರು : ವಿಧಾನಸಭಾ ಉಪ ಸಭಾಪತಿ ರುದ್ಪಪ್ಪ ಲಮಾಣಿ ಅವರು ಕುಟುಂಬ ಸಮೇತ ಭಾನುವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇತ್ತೀಚಿಗೆ ಕಾರು ಅಪಘಾತಕ್ಕೋಳಗಾಗಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು, ಆರೋಗ್ಯ ಚೇತರಿಕ ಬಳಿಕ ಚಾಮುಂಡಿ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಆರ್ಶಿವಾದದಿಂದ ಆಪಘಾತದಿಂದ ಬದುಕುಳಿದಿದ್ದೇನೆ. ಚಾಮುಂಡಿ ನನಗೆ ಮರು ಜೀವ ನೀಡಿದ್ದಾಳೆ. ಹೀಗಾಗಿ ಆರೋಗ್ಯ ಚೇತರಿಕೆ ಬಳಿಕ ಚಾಮುಂಡಿ ಬಳಿ ಬಂದಿದ್ದೇನೆ ಎಂದರು.
ಈ ಹಿಂದೆ ಮುಜರಾಯಿ ಇಲಾಖೆ ಸಚಿವನಾಗಿದ್ದಾಗ, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರಿನ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮೈಸೂರು ಹಾಗೂ ಚಾಮುಂಡಿ ನನಗೇನು ಹೊಸದೇನಲ್ಲ. ಆಗಾಗ ಬಂದು ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.





