Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ತಂದೆಯ ನೋಡುತ್ತಾ ಬೆಳೆಯುವ ಮಕ್ಕಳು

childrens growing with father

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ, ತಂದೆಯ ಪಾತ್ರವೂ ಇದೆ. ತಂದೆ-ತಾಯಿಯ ಪಾತ್ರ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತದೆ. ಮಕ್ಕಳಿಗೆ ತಮ್ಮ ತಂದೆಯೇ ರೋಲ್ ಮಾಡೆಲ್ ಆಗಿರುತ್ತಾನೆ. ಹೆಚ್ಚಿನ ಮಕ್ಕಳು ತಾಯಿಯ ಮಾತನ್ನು ಕೇಳದೇ ಇರಬಹುದು ಆದರೆ ತಂದೆಯ ಮಾತನ್ನು ಎಂದಿಗೂ ಮೀರುವುದಿಲ್ಲ.

ಹೀಗಿರುವಾಗ ತಂದೆಯಾದವನು ತನ್ನ ಮಕ್ಕಳಿಗೆ ಸಮಾಜದಲ್ಲಿ ಹೇಗೆ ಬದುಕಬೇಕು, ಕಷ್ಟಗಳನ್ನು ಹೇಗೆ ಎದುರಿಸಬೇಕು. ಹೀಗೆ ಒಂದಷ್ಟು ವಿಷಯಗಳ ಬಗ್ಗೆ ತಿಳಿ ಹೇಳಿ ಕಲಿಸಿಕೊಡಬೇಕು. ಇದು ಪ್ರತಿಯೊಬ್ಬ ತಂದೆಯ ಜವಾಬ್ದಾರಿಯೂ ಹೌದು. ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ಈ ವಿಷಯಗಳನ್ನು ಕಲಿಸಿಕೊಡಲೇಬೇಕು. ಕೆಲ ಮಕ್ಕಳು ತಮಗಿಂತ ದೊಡ್ಡವರಿಗೆ ಗೌರವ ಕೊಟ್ಟು ಮಾತನಾಡುವುದಿಲ್ಲ. ಹೀಗಿರುವಾಗ ತಂದೆಯಾದವನು, ಇತರರಿಗೆ ಗೌರವ ಕೊಡುವುದು ಎಷ್ಟು ಮುಖ್ಯ, ಈ ನಮ್ಮ ಸಣ್ಣ ನಡೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬೇಕು.

ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಂಡ ಬಳಿಕ ತಂದೆ-ತಾಯಿಯನ್ನು ನಡು ದಾರಿಯಲ್ಲಿ ಬಿಟ್ಟು ಹೋದ ಅದೆಷ್ಟೋ ಮಕ್ಕಳಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬ ತಂದೆಯೂ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ತಂದೆ-ತಾಯಿ ಹಾಗೂ ಕುಟುಂಬದ ಮೌಲ್ಯಗಳ ಬಗ್ಗೆ ಕಲಿಸಿಕೊಡಬೇಕು. ಜೊತೆಗೆ ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳನ್ನು ಅನುಸರಿಸಬಾರದು ಎಂಬುದನ್ನು ತಿಳಿ ಹೇಳಬೇಕು. ಎಂಬುದನ್ನು ಕಲಿಸಬೇಕು. ಕಷ್ಟಪಟ್ಟರೆ ಮಾತ್ರ ಶ್ರಮಕ್ಕೆ ಪ್ರತಿ-ಲ ಸಿಗುತ್ತೆ, ಯಶಸ್ಸು ಎಂಬುದು ಸಿಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

ಭಯ, ಕಷ್ಟ, ಸವಾಲುಗಳನ್ನು ಎದುರಿಸಿ ನಿಲ್ಲುವುದು ಹೇಗೆ, ಧೈರ್ಯಶಾಲಿಯಾಗಿರುವುದು ಹೇಗೆ? ಆತ್ಮ ವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಇಂತಹ ವಿಷಯಗಳನ್ನು ಚಾಚೂ ತಪ್ಪದೇ ಮಕ್ಕಳಿಗೆ ಕಲಿಸಿಕೊಡಬೇಕು. ತಂದೆಯಾದವನು ತನ್ನ ಮಕ್ಕಳಿಗೆ ಜವಾಬ್ದಾರಿಯ ಪಾಠವನ್ನು ಹೇಳಲೇಬೇಕು. ಹೌದು ಸಂಬಂಧವನ್ನು ನಿಭಾಯಿಸುವುದರಲ್ಲಿ ಆಗಿರಲಿ ಅಥವಾ ಕೆಲಸದಲ್ಲಿಯೇ ಆಗಿರಲಿ ಜವಾಬ್ದಾರಿ ಎಷ್ಟು ಮುಖ್ಯ, ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತಿಳಿ ಹೇಳಬೇಕು.

ತಂದೆಯಾದವನು ವಿಶೇಷವಾಗಿ ಮಹಿಳೆಯರಿಗೆ ಗೌರವ ಕೊಡುವುದರ ಬಗ್ಗೆ ತನ್ನ ಮಕ್ಕಳಿಗೆ ಹೇಳಿಕೊಡಬೇಕು. ಮಹಿಳೆಯರನ್ನು ಕೆಟ್ಟ ಭಾವನೆಯಿಂದ ನೋಡಬಾರದು. ಗೌರವ ತೋರಬೇಕು ಎಂಬುದನ್ನು ಸಣ್ಣ ವಯಸ್ಸಿನಿಂದಲೇ ಕಲಿಸಬೇಕು.ಜೀವನದಲ್ಲಿ ಪ್ರಾಮಾಣಿಕತೆಯ ಮಹತ್ವವನ್ನು ಮಕ್ಕಳು ಅರಿಯುವಂತೆ ಮಾಡಬೇಕು. ಸ್ನೇಹ, ಪ್ರೀತಿ ಸೇರಿದಂತೆ ಯಾವುದೇ ಸಂಬಂಧದಲ್ಲಿ ಅಥವಾ ಬದುಕಿನಲ್ಲಿ ಪ್ರಾಮಾಣಿಕತೆ ಎಷ್ಟು ಮುಖ್ಯ. ಇದಲ್ಲದೇ ಜೀವನದಲ್ಲಿ ಶಿಸ್ತು, ಹಣಕಾಸು ನಿರ್ವಹಣೆ ಎಷ್ಟು ಮುಖ್ಯ. ಜೀವನವನ್ನು ಹೇಗೆ ಸಾಗಿಸಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ವಿಚಾರಗಳ ಬಗ್ಗೆ ತಂದೆಯಾದವನು ತನ್ನ ಮಕ್ಕಳಿಗೆ ಕಲಿಸಲೇಬೇಕು. ತಂದೆ-ತಾಯಿಯಿಂದ ಉತ್ತಮ ಸಂಸ್ಕಾರ ಪಡೆದರೆ ಮಕ್ಕಳು ಉತ್ತಮರು, ಜೀವನದಲ್ಲಿ ಸಫಲರೂ ಆಗುತ್ತಾರೆ.

ತಂದೆ-ತಾಯಿಯಾಗಿ ಮಕ್ಕಳ ಎದುರೇ ನೀವು ತಪ್ಪು ಹಾದಿ ಹಿಡಿಯಬೇಡಿ. ಸದಾ ಒಳ್ಳೆಯದನ್ನೇ ಬಯಸಿ, ಒಳ್ಳೆಯದನ್ನೇ ಮಾಡಿ, ಭಾಷೆ, ಆಡುವ ಮಾತಿನ ವೇಳೆ ನಿಗಾವಹಿಸಿ ಸಂಸ್ಕಾರದಿಂದ ಮಾತನಾಡಬೇಕು. ಎದುರಿರುವ ವ್ಯಕ್ತಿಗಳ ಜೊತೆ ಸೌಜನ್ಯದಿಂದ ವ್ಯವಹರಿಸಬೇಕು. ಏಕೆಂದರೆ ತಂದೆ-ತಾಯಿ ಏನು ಮಾಡುತ್ತಾರೋ ಮಕ್ಕಳೂ ಅದನ್ನೇ ಮಾಡುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ.

ಚಾಣಕ್ಯನ ನೀತಿಗಳನ್ನು ಯಾರೇ ಆಗಲಿ ಜೀವನದಲ್ಲಿ ಅಳವಡಿಸಿಕೊಂಡರೆ ಅವರು ತಮ್ಮ ಜೀವನದಲ್ಲಿ ಸಾಫಲ್ಯವನ್ನು ಕಂಡು ಉತ್ತಮರಾಗುತ್ತಾರೆ. ಆದರೆ, ಅವರಲ್ಲಿ ಸಂಸ್ಕಾರ ಇರಬೇಕಾದದ್ದು ಮುಖ್ಯ. ಮಕ್ಕಳ ಸಂಸ್ಕಾರದಲ್ಲಿ ತಂದೆ-ತಾಯಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಯಾವುದೇ ತಂದೆ-ತಾಯಿ ಮಕ್ಕಳನ್ನು ಯೋಗ್ಯರನ್ನಾಗಿಸಲು ಶ್ರಮಿಸುತ್ತಾರೆ. ಇದಕ್ಕಾಗಿ ತಂದೆ-ತಾಯಿ ಕಠೋರ ಶ್ರಮಪಡುತ್ತಾರೆ. ತನ್ನ ಸಂತತಿಯ ಉಜ್ವಲ ಭವಿಷ್ಯ ಬಯಸಿ, ತಮ್ಮ ಪ್ರತಿಯೊಂದು ಖುಷಿಯನ್ನು ನಗುನಗುತ್ತಾ ತ್ಯಾಗ ಮಾಡಿ ಜೀವನ ಸಾಗಿಸುತ್ತಾ, ತಮ್ಮ ಮಕ್ಕಳ ಪ್ರತಿಯೊಂದು ಕಷ್ಟವನ್ನೂ ದೂರ ಮಾಡಲು ಪಡಿಪಾಟಲು ಪಡುತ್ತಿರುತ್ತಾರೆ.

“ನೈತಿಕತೆಯ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ತಂದೆ-ತಾಯಿ ಮಕ್ಕಳ ಏಳಿಗೆಯನ್ನು ಬಯಸುವವ ರಾದರೆ ಅವರು ತಮ್ಮ ಮಕ್ಕಳಿಗೆ ನೈತಿಕತೆಯ ಮಹತ್ವವನ್ನು ಮನದಟ್ಟು ಮಾಡಿಸಬೇಕು. ನೈತಿಕ ಗುಣಗಳನ್ನು ಬೋಧಿಸಬೇಕು. ಮಕ್ಕಳನ್ನು ದೇಶದ ಮಹಾನ್ ವ್ಯಕ್ತಿಗಳನ್ನಾಗಿ ಮಾಡಬೇಕು ಅಂದರೆ ಮಕ್ಕಳನ್ನು ಆ ದಿಕ್ಕಿನತ್ತ ಪ್ರೇರೇಪಿಸಬೇಕು. ನಿಮ್ಮ ಮಕ್ಕಳ ಎದುರೇ ನೀವು ತಪ್ಪು ಹಾದಿ ಹಿಡಿಯಬೇಡಿ. ಸದಾ ಒಳ್ಳೆಯದನ್ನೇ ಬಯಸಿ ಮತ್ತು ಸದಾ ಒಳ್ಳೆಯದನ್ನೇ ಮಾಡಿ.”

Tags:
error: Content is protected !!