Mysore
22
overcast clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಭ್ರಷ್ಟಾಚಾರ ಆರೋಪ; ಸರ್ಕಾರ ಉತ್ತರಿಸಲಿ

ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ ಕೆ.ಎಸ್. ಬಸವಂತಪ್ಪ ಅವರು ಇತ್ತೀಚೆಗೆ ರಾಜ್ಯ ಸರ್ಕಾರ,  ನಗರ ಸ್ಥಳೀಯ  ಸಂಸ್ಥೆಗಳಲ್ಲಿ  ದಿನಗೂಲಿ  ಆಧಾರದ ಮೇಲೆ  ಕೆಲಸ  ಮಾಡುತ್ತಿದ್ದ  ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಕನಿಷ್ಠ ಮೂರರಿಂದ  ಐದು ಲಕ್ಷ ರೂ. ಲಂಚ  ಪಡೆಯುತ್ತಿದೆ   ಎಂದು  ಡಾ.ಬಿ.ಆರ್. ಅಂಬೇಡ್ಕರ್  ಜಯಂತಿ   ಕಾರ್ಯಕ್ರಮದಲ್ಲಿ  ಬಹಿರಂಗವಾಗಿ  ಹೇಳಿದ್ದಾರೆ.   ಇದೇ ಮಾತನ್ನು,  ವಿರೋಧ ಪಕ್ಷದವರು ಹೇಳಿದ್ದರೆ  ಸರ್ಕಾರ  ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಹೊರಟಿರುವುದನ್ನು ಸಹಿಸದೇ ವಿರೋಧ ಪಕ್ಷದವರು  ಮಾತನಾಡುತ್ತಿದ್ದಾರೆ  ಎಂದು ಆಡಳಿತ ಪಕ್ಷದವರು ಆಪಾದಿಸುತ್ತಿದ್ದರು.

ಇತ್ತೀಚೆಗೆ  ರಾಜ್ಯ  ಸರ್ಕಾರದ  ವಿರುದ್ಧ  ಅನೇಕ  ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಬಸವರಾಜ ರಾಯರಡ್ಡಿ ಅವರು ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂ.೧ ಎಂದು ಆಪಾದಿಸಿದ್ದರು.  ರಾಜ್ಯ ಗುತ್ತಿಗೆದಾರರ ಸಂಘವು,  ನಮ್ಮ ಬಾಕಿ ಬಿಲ್ ಪಾವತಿಸಲು ಕೆಲವು ಸಚಿವರ ಆಪ್ತರು ಶೇ.   ೬೦ ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು  ಆಪಾದಿಸಿದ್ದರು. ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದ್ದರೂ  ಇದನ್ನು  ಸರ್ಕಾರ ಗಂಭೀರವಾಗಿ   ಪರಿಗಣಿಸಿಯೇ ಇಲ್ಲ

– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

 

Tags:
error: Content is protected !!