Mysore
32
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

‌ಮಹಿಳೆಯರಿಗೆ ಪೊಲೀಸ್ ಠಾಣೆ ಬಗ್ಗೆ ಭಯ ಬೇಡ ; ನಾಗಲಕ್ಷ್ಮಿ ಚೌಧರಿ ಸಲಹೆ

ಮೈಸೂರು : ಪೊಲೀಸ್‌ ಠಾಣೆಗಳಿರುವುದು ಮಹಿಳೆಯರ ರಕ್ಷಣೆಗಾಗಿ. ಹೀಗಾಗಿ ಪೊಲೀಸ್‌ ಠಾಣೆ ಎಂದರೆ ಭಯ ಬೇಡ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಹಿಳೆಯರಿಗೆ ಸಲಹೆ ನೀಡಿದರು.

ನಗರದ ಮಹಾರಾಣಿ ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೆಣ್ಣು ಅತ್ಯಾಚಾರಕ್ಕೆ ಒಳಗಾದಾಗ, ಆ ಹೆಣ್ಣು ಪೊಲೀಸ್‌ ಠಾಣೆಗೆ ಹೋಗಲು ಭಯಪಡುತ್ತೆ. ಈ ಪ್ರವೃತ್ತಿ ನಿಲ್ಲಬೇಕು. ದೇಶದ ಕಾನೂನು ಮಹಿಳೆಯರ ಆತ್ಮರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಠಾಣೆಗಳು ಮಹಿಳೆಯರಿಗೆ ತವರು ಮನೆ ಇದ್ದಂತೆ. ಹೀಗಾಗಿ ಠಾಣೆ ಬಗ್ಗೆ ಭಯ ಪಡದೆ ಭರವಸೆ ಇರಲಿ ಎಂದು ಹೇಳಿದರು.

ಹೆಣ್ಣು ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಗುಣ ಬೆಳೆಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಶಿಕ್ಷಿತರಾಗಿ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದ ಅವರು ಅನ್ಯಾಯ, ಅತ್ಯಾಚಾರವಾದಾಗ ಹೆಣ್ಣಿನ ಪರ ಸಮಾಜ ಧ್ವನಿಯಾಗಬೇಕು ಎಂದು ಕರೆ ನೀಡಿದರು.

ಹೆಣ್ಣು ಗಂಡಿಗೆ ಪ್ರತ್ಯೇಕ ವೃತ್ತಿಗಳಿಲ್ಲ. ಎಲ್ಲಾ ಕೆಲಸನ್ನು ಎಲ್ಲರೂ ಸಮಾನವಾಗಿ ಮಾಡಬೇಕು ಎಂದು ತಿಳಿಸಿದರು.

Tags:
error: Content is protected !!