ಗುಜರಾತ್: ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳು ಹಾಗೂ ಸಮಾಜ ಸೇವಕಿ ನಿಲಾಂಬೆನ್ ಪಾರೆಖ್ (92) ಅವರು ವಯೋಸಹಜ ಕಾಯಿಲೆಯಿಂದ ಸೋಮವಾರ ಗುಜರಾತ್‌ನ ನವಸಾರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಗಾಂಧೀಜಿ ಅವರ ಪುತ್ರ ಹರಿಲಾಲ್ ಗಾಂಧಿ. ಹರಿಲಾಲ್ ಅವರ ಕಿರಿಯ ಪುತ್ರಿ ರಾಮಿಬೆನ್ ಅವರ ಹಿರಿಯ ಮಗಳೇ ನಿಲಾಂಬೆನ್ ಪಾರೆಖ್.
ನಿಲಾಂಬೆನ್ ಅವರು ʼದಕ್ಷಿಣಾಪಥʼ ಎಂಬ ಎನ್‌ಜಿಒ ಸ್ಥಾಪಿಸಿ ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಅವರಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸುವಲ್ಲಿ ಕೆಲಸ ಮಾಡುತ್ತಿದ್ದರು.
ನಿಲಾಂಬೆನ್ ಅವರು, “gandhi’s lost jewel: hirlal gandhi” ಎಂಬ ಮಹಾತ್ಮ ಗಾಂಧೀಜಿ ಅವರ ಕುರಿತಾಗಿ ಪುಸ್ತಕ ಬರೆದಿದ್ದರು.





