ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು. ಅವರು ನನ್ನೊಂದಿಗೆ ಭಗವದ್ಗೀತೆಯನ್ನು ಕುರಿತು ಮಾತನಾಡಿದರು. ಅವರು ಸರ್ ಎಲ್ವಿನ್ ಆರ್ನಾಲ್ಡ್‌ರ ಭಗವದ್ಗೀತೆಯ ಅನುವಾದವನ್ನು ಓದುತ್ತಿದ್ದರು. ನನ್ನನ್ನೂ ತಮ್ಮೊಂದಿಗೆ ಭಗವದ್ಗೀತೆಯ …







