Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಹುಣಸೂರು | ಶಾಲೆಯಲ್ಲಿ ಅನೈತಿಕ ಚಟುವಟಿಕೆ ; ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಹುಣಸೂರು : ತಾಲೂಕಿನ ಸರಕಾರಿ ಶಾಲೆಯಲ್ಲಿ ಬಾಲಕಿಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು, ಮಹಿಳೆಯರು ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ತಾಲೂಕಿನ ದೊಡ್ಡಹೆಜ್ಜೂರಿನ ವಿವಾಹಿತ ರವಿ(೪೨) ಎಂಬಾತನೇ ಬಂಧಿತ ಆರೋಪಿ. ಈತ ಇದೇ ಶಾಲೆಯಲ್ಲಿ ಹಿಂದೆ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಕೆಲಸ ಬಿಟ್ಟ ನಂತರ ಗ್ರಾಮದಲ್ಲೇ ಗ್ರಾಮ-ಒನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಶನಿವಾರ ಮದ್ಯಾಹ್ನದ ನಂತರ ೯ನೇ ತರಗತಿಯ ವಿದ್ಯಾರ್ಥಿನಿಯನ್ನು ಹಿರಿಯ ಪ್ರಾಥಮಿಕ ಶಾಲೆಗೆ ಕರೆಸಿಕೊಂಡು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ಬಾಲಕಿಯ ಸಹೋದರ ಹಾಗೂ ಗ್ರಾಮಸ್ಥರು ಪತ್ತೆ ಹಚ್ಚಿ, ಗೂಸಾ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಗೆರೆ ಇನ್ಸ್ಪೆಕ್ಟರ್ ಮುನಿಸ್ವಾಮಿ ವಶಕ್ಕೆ ಪಡೆದರು.

ಈ ಸಂಬಂಧ ಬಾಲಕಿಯ ತಾಯಿ ಹಾಗೂ ಬಿಇಒ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಶಾಲೆಗೆ ಪೊಲೀಸ್ ಇನ್ಸ್ಪೆಕ್ಟರ್ ಮುನಿಸ್ವಾಮಿ, ಬಿಇಒ ಮಹದೇವ್ ಎಸ್.ಪಿ. ಹಾಗೂ ಸಿ.ಆರ್.ಪಿ, ಬಿಆರ್‌ಪಿಗಳು ಭೇಟಿ ನೀಡಿದ್ದರು.

ಮುಖ್ಯ ಶಿಕ್ಷಕನ ವಿರುದ್ದ ದೂರು:
ಶಾಲೆಯ ಬೀಗದ ಕೀ ರವಿ ಬಳಿ ಹೇಗೆ ಹೋಯಿತು. ಇಲ್ಲಿ ಮುಖ್ಯ ಶಿಕ್ಷಕ ಬಿ.ಎಂ.ಸತೀಶ್‌ಕುಮಾರ್‌ರ ಕರ್ತವ್ಯ ನಿರ್ಲಕ್ಷವಿದ್ದು, ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲಾ, ಹೀಗಾಗಿ ಮುಖ್ಯ ಶಿಕ್ಷಕರ ಬೇಜವಾಬ್ದಾರಿತನ ಹಾಗೂ ಅವರು ತಲೆಮರೆಸಿಕೊಂಡಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಇಒ ಮಹದೇವ್ ಎಸ್.ಪಿ  ತಿಳಿಸಿದ್ದಾರೆ.

Tags:
error: Content is protected !!