Mysore
23
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ವಿದ್ಯುತ್ ದೀಪಗಳನ್ನು ಅಳವಡಿಸಿ

dgp murder case

ಮೈಸೂರಿನ ದೇವೇಗೌಡ ವೃತ್ತದ ಬಳಿ ಇರುವ ವಿದ್ಯಾ ವಿಕಾಸ್ ಕಾಲೇಜಿನ ಹಿಂಭಾಗದ ಗೇಟ್‌ನಿಂದ ವಸಂತ ನಗರ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ಜನರು ಕಗ್ಗತ್ತಲಿನಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯಲ್ಲಿ ನಾಲ್ಕು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಅನೇಕ ಖಾಸಗಿ ಪಿಜಿಗಳಿವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ವಸಂತನಗರ ಬಸ್ ನಿಲ್ದಾಣದಿಂದ ವಿದ್ಯಾ ವಿಕಾಸ್ ಕಾಲೇಜಿನ ಹಿಂಭಾಗದ ಗೇಟ್‌ವರೆಗೆ 1 ಕಿ.ಮೀ.ನಷ್ಟು ದೂರವಿದ್ದು, ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಕತ್ತಲಾಗುವುದರಿಂದ ವಿಧಿ ಇಲ್ಲದೆ ಅವರು
ಕತ್ತಲಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬರು ಸಂಜೆ ಕಾಲೇಜು ಮುಗಿಸಿ ಹೋಗುವಾಗ ಕತ್ತಲಿನಲ್ಲಿ ಹಾವನ್ನು ತುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಆ
ವಿದ್ಯಾರ್ಥಿಗೆ ಯಾವುದೇ ಅಪಾಯವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಭಾಗದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿದೆ.

-ಕೆ.ಎಂ.ಅಭಿಷೇಕ್ ಕಲ್ಲಂಬಾಳು, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.

 

Tags:
error: Content is protected !!