Mysore
23
broken clouds

Social Media

ಮಂಗಳವಾರ, 05 ಮೇ 2026
Light
Dark

ವಿವಿಗಳಲ್ಲಿನ ಖಾಲಿ ಹುದ್ದೆ ಹಂತ ಹಂತವಾಗಿ ಭರ್ತಿ: ಡಾ.ಸುಧಾಕರ್‌

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸುಂಕನೂರು ಅವರು, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 70% ಭೊದಕ ಹುದ್ದೆಗಳು ಖಾಲಿ ಇವೆ. ನಿಧನ, ನಿವೃತ್ತಿಯಿಂದ ಖಾಲಿ ಆಗಿರುವ ಹುದ್ದೆಗಳು ಭರ್ತಿ ಆಗಿಲ್ಲ. ಕೂಡಲೇ ಭರ್ತಿ ಮಾಡಬೇಕು. ಹಾಗೆಯೇ ವಿವಿಗಳಲ್ಲಿ ನಿವೃತ್ತಿ ಅಗಿರುವ ನೌಕರರಿಗೆ ಪಿಂಚಣಿ ಹಣವನ್ನು ಸರ್ಕಾರವೇ ಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸುಧಾಕರ್‌ ಅವರು, ರಾಜ್ಯದಲ್ಲಿ ಸುಮಾರು 2,800 ಭೋದಕ ಹುದ್ದೆಗಳು ಖಾಲಿ ಇವೆ. ಹಿಂದಿನ ಸರ್ಕಾರಗಳು ಯಾರೂ ನೇಮಕ ಮಾಡಿಲ್ಲ. ನೇಮಕಾತಿ ಸಂಬಂಧ ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಕೆಲವೊಂದಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿಎಂ ಕೂಡ ಖಾಲಿ ಹುದ್ದೆ ತುಂಬಲು ಒಪ್ಪಿದ್ದಾರೆ. ಹಂತ ಹಂತವಾಗಿ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಕೆಲವು ವಿವಿಗಳಲ್ಲಿ ಅನಗತ್ಯವಾಗಿ ಹುದ್ದೆ ಭರ್ತಿ ಮಾಡಲಾಗಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಿ ಆದಷ್ಟು ಬೇಗ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ ಎಂದರು.

ವಿವಿ ನಿವೃತ್ತ ನೌಕರರಿಗೆ ಪಿಂಚಣಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಿವೃತ್ತಿ ನೌಕರರಿಗೆ ಸರ್ಕಾರದಿಂದ 50% ಹಾಗೂ ವಿವಿಯಿಂದ 50% ಸೇರಿ ಪಿಂಚಣಿ ನೀಡಬೇಕು ಎಂಬ ನಿಯಮ ಇದೆ. ವಿವಿಯಿಂದ ಪಿಂಚಣಿ ಹಣ ಸರಿಯಾಗಿ ನೀಡದೆ ಇರುವುದರಿಂದ ಸರ್ಕಾರದ ಮೇಲೆ ಹೊರೆ ಬೀಳುತ್ತಿದೆ. ಈ ವರ್ಷ 91 ಕೋಟಿ ಹಣವನ್ನು ಸರ್ಕಾರ ಪಿಂಚಣಿಗೆ ಕೊಟ್ಟಿದೆ. ಪೂರ್ತಿ ಹಣ ಕೊಡಬೇಕು ಎಂದರೆ ಅದು ಸಾಧ್ಯವಿಲ್ಲ ಎಂದರು.

Tags:
error: Content is protected !!