Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ನಿವೃತ್ತಿ ಸದ್ಯಕ್ಕಿಲ್ಲ: ವಿರಾಟ್‌ ಕೊಹ್ಲಿ

ಬೆಂಗಳೂರು: ನಾನು ಕ್ರಿಕೆಟ್‌ ಆಟವನ್ನು ಬಹಳ ಪ್ರೀತಿಸುತ್ತೇನೆ. ನನ್ನಲ್ಲಿನ ಸ್ಪರ್ಧಾತ್ಮಕ ಪ್ರವೃತ್ತಿ ಜೀವಂತ ಇರುವವರೆಗೂ ನಿವೃತ್ತಿ ಘೋಷಿಸುವುದಿಲ್ಲ ಎಂದು ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ನಾನು ಕ್ರಿಕೆಟ್‌ ಆಟವನ್ನು ಆನಂದಿಸುತ್ತಿದ್ದು, ನನ್ನ ಆತ್ಮತೃಪ್ತಿಗಾಗಿ ಇನ್ನಷ್ಟು ಕಾಲ ಕ್ರಿಕೆಟ್‌ ಅಡುತ್ತೇನೆ ಎಂದು ಹೇಳುವ ಮೂಲಕ ನಿವೃತ್ತಿಯ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

ಮುಂದೆ ನಿವೃತ್ತಿಯಾದಾಗ ಏನು ಮಾಡುವಿರಿ ಎಂದು ಬಹಳ ಜನ ಕೇಳುತ್ತಾರೆ. ಅದರ ಬಗ್ಗೆ ನಾನು ಏನೂ ಯೋಜಿಸಿಲ್ಲ. ನಾನು ಯಾವಾಗಲೂ ಹೃದಯದ ಮಾತನ್ನು ಕೇಳುತ್ತೇನೆ. ನೆಮ್ಮದಿಗೆ ಬೇಕಾಗುವಷ್ಟು ಹಣ ಗಳಿಸುತ್ತೇನೆ. ಅದಕ್ಕಾಗಿ ಮೌಲ್ಯಗಳನ್ನು ಬಿಡುವುದಿಲ್ಲ ಎಂದರು.

ನಾನು ವೃತ್ತಿ ಜೀವನದ ವಿಭಿನ್ನ ಹಂತದಲ್ಲಿ ಇದ್ದೇನೆ. 20ರ ವಯಸ್ಸಿನಲ್ಲಿ ನೀವು ಮಾಡಬಹುದಾದಷ್ಟು ಕೆಲಸಗಳನ್ನು ನಿಮ್ಮ 30ರ ವಯಸ್ಸಿನಲ್ಲಿ ಮಾಡಲು ಸಾಧ್ಯವಿಲ್ಲ. ಶಕ್ತಿ ಮೀರಿ ಪ್ರದರ್ಶನ ನೀಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್‌ ಗೆದ್ದ ಬಳಿಕ ಚುಟುಕು ಕ್ರಿಕೆಟ್‌ಗೆ ವಿರಾಟ್‌ ನಿವೃತ್ತಿ ಘೋಷಿಸಿದ್ದರು.

 

Tags:
error: Content is protected !!