Mysore
28
broken clouds

Social Media

ಶನಿವಾರ, 18 ಏಪ್ರಿಲ 2026
Light
Dark

ಓದುಗರ ಪತ್ರ: ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಲಿ

dgp murder case

ಮೈಸೂರಿನ ಮುಖ್ಯ ಅಂಚೆ ಕಚೇರಿಯ ಸ್ಪೀಡ್‌ಪೋಸ್ಟ್ ವಿಭಾಗದಲ್ಲಿರುವ ಕೆಲವು ಸಿಬ್ಬಂದಿ ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಕೆಲವು ಕೌಂಟರ್‌ಗಳಲ್ಲಿ ಸಿಬ್ಬಂದಿ ಕೆಲಸಕ್ಕೆ ತಡವಾಗಿ ಹಾಜರಾಗುವುದಲ್ಲದೆ, ಕೆಲಸಕ್ಕೆ ಹಾಜರಾದ ಮೇಲೂ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತಿರುವ ಗ್ರಾಹಕರನ್ನೂ ಲೆಕ್ಕಿಸದೆ ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿ ನಂತರ ಗ್ರಾಹಕರ ಬಳಿಗೆ ಸಿಬ್ಬಂದಿ ಬರುತ್ತಾರೆ. ಇದನ್ನು ಪ್ರಶ್ನಿಸುವ ಗ್ರಾಹಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅಲ್ಲದೆ ಕಚೇರಿಯ ಕೆಲಸಗಳಿವೆ ಎಂದು ಸಬೂಬು ನೀಡುತ್ತಾರೆ. ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಾರೆ. ಹೀಗಾದರೆ ಸರತಿ ಸಾಲಿನಲ್ಲಿ ಕಾದು ನಿಲ್ಲುವ ಗ್ರಾಹಕರ ಪಾಡು ಏನಾಗಬೇಕು? ತಾವು ಇರುವುದು ಸಾರ್ವಜನಿಕ ಸೇವೆಗಾಗಿ ಎಂಬುದನ್ನೇ ಮರೆತು ಬೇಜವಾಬ್ದಾರಿ ತೋರುವ ಇಂತಹ ಸಿಬ್ಬಂದಿಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡು, ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಲಿ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!