Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಓದುಗರ ಪತ್ರ | ಯು ಟರ್ನ್ ನಿಷೇಧಿಸಿ ಅಪಘಾತ ತಪ್ಪಿಸಿ

ಮೈಸೂರಿನ ಇಲವಾಲ ಸಮೀಪದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಬಳಿ ಇರುವ ವಿನಾಯಕ ಗಾರ್ಡನ್ ಸಿಟಿ, ಬ್ರಹ್ಮಾನಂದ ಸಾಗರ ಲೇಔಟ್‌ನ ಬಳಿಯ ರಸ್ತೆ ವಿಭಜಕ(ಡಿವೈಡರ್)ದಲ್ಲಿ ಯು ಟರ್ನ್ ತೆಗೆದುಕೊಳ್ಳಲು ಅವಕಾಶ ನೀಡಿದ್ದು, ಇದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.

ಇಲವಾಲದಿಂದ ಮೈಸೂರಿನ ಕಡೆಗೆ ಸಂಚರಿಸುವ ವಾಹನಗಳು ಅತಿಯಾದ ವೇಗದಲ್ಲಿ ಸಾಗುತ್ತವೆ. ಇದರಿಂದಾಗಿ ವಿನಾಯಕ ಗಾರ್ಡನ್ ಸಿಟಿ ಹಾಗೂ ಅರ್ಬನ್ ವ್ಯಾಲಿ ಲೇಔಟ್‌ನ ನಿವಾಸಿಗಳು ಇಲವಾಲದ ಕಡೆಗೆ ಹೋಗಲು ಈ ರಸ್ತೆ ವಿಭಜಕವನ್ನು ದಾಟುವ ವೇಳೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಈ ಭಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಸಾಕಷ್ಟು ದೂರುಗಳು ಕೂಡ ದಾಖಲಾಗಿವೆ. ಆದ್ದರಿಂದ ಸಂಬಂಧಪಟ್ಟವರು ವಿನಾಯಕ ಗಾರ್ಡನ್ ಬಳಿ ಇರುವ ರಸ್ತೆ ವಿಭಜಕದ ಯು ಟರ್ನ್‌ಅನ್ನು ಮುಚ್ಚಿದರೆ ಅಪಘಾತಗಳನ್ನು ತಪ್ಪಿಸಬಹುದು. ಅಲ್ಲದೆ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ಬಳಿಯಿಂದ ಇಲವಾಲದವರೆಗೂ ಸರ್ವೀಸ್ ರಸ್ತೆ ನಿರ್ಮಾಣ ಮಾಡಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸಬೇಕಿದೆ.

-ಸ್ಥಳೀಯ ನಿವಾಸಿಗಳು, ಅರ್ಬನ್ ವ್ಯಾಲಿ ಲೇಔಟ್ ಹಾಗೂ ವಿನಾಯಕ ಗಾರ್ಡನ್ ಸಿಟಿ, ಇಲವಾಲ, ಮೈಸೂರು.

Tags:
error: Content is protected !!