Mysore
18
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಕಾಂಗ್ರೆಸ್‌ ಪಕ್ಷ ಪ್ರಚಾರಕ್ಕಾಗಿ ಗಾಂಧೀಜಿ ಹೆಸರು ಬಳಕೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬೆಳಗಾವಿ: ಗಾಂಧಿವಾದಿ ಎಂದು ಹೇಳಿಕೊಂಡಿರುವ ನಕಲಿ ಗಾಂಧಿಗಳು ತಮ್ಮ ಕಾಂಗ್ರೆಸ್‌ ಪಕ್ಷದ ಪ್ರಚಾರಕ್ಕಾಗಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ದೂರಿದರು.

ಇಂದು (ಜ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಕಾಂಗ್ರೆಸ್‌ ಪಕ್ಷವು ಮೂಲ ಕಾಂಗ್ರೆಸ್‌ ಪಕ್ಷವಲ್ಲ. ತಮ್ಮ ಬೆಳವಣಿಗೆಗಾಗಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದ ಗಾಂಧೀಜಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಜೊತೆಗೆ ಕಾಂಗ್ರೆಸ್‌ ಪಕ್ಷವು ಡಾ. ಬಿ.ಆರ್‌. ಅಂಬೇಡ್ಕರ್‌ ಅವರನ್ನು ಅವಮಾನಿಸಿತು. ಸಾರ್ವತ್ರಿಕ ಚುನಾವಣೆಗಳಲ್ಲಿ ಸೋಲಿಸಿತು. ಅವರ ಅಂತ್ಯಕ್ರಿಯೆಗೆ ನವದೆಹಲಿಯಲ್ಲಿ ಅನುಮತಿ ನೀಡದೆ ಮುಂಬೈನಲ್ಲಿ ನಡೆಸಲಾಯಿತು ಎಂದು ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್‌ ಶುಲ್ಕ ಭರಿಸಲು ಹಣವಿಲ್ಲದಿರುವಾಗ, ಇಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಸಮಾವೇಶಕ್ಕೆ ಸರ್ಕಾರದ ಹಣ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

Tags:
error: Content is protected !!