Mysore
23
broken clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಚೀನಾದಲ್ಲಿ HMPV ಸೋಂಕಿನ ಪ್ರಮಾಣ ಇಳಿಕೆ

ಬೀಜಿಂಗ್:‌ ಉತ್ತರ ಚೀನಾದಲ್ಲಿ ಎಚ್‌ಎಂಪಿವಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಸಂಶೋಧಕ ವಾಂಗ್‌ ಲಿಪಿಂಗ್‌, ಹ್ಯೂಮನ್‌ ಮೆಟಾನ್ಯುಮೋ ವೈರದ್(ಎಚ್‌ಎಂಪಿವಿ) ಹೊಸದಲ್ಲ. ತುಂಬಾ ವರ್ಷಗಳಿಂದ ಇದೆ ಎಂದು ಹೇಳಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಅದರಲ್ಲೂ ಮಕ್ಕಳಲ್ಲಿ ಸೋಂಕಿತರ ಸಂಖ್ಯೆ ಪ್ರಮಾಣ ಕ್ಷೀಣಿಸಿದೆ ಎಂದು ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆಯು ಈ ಹಿಂದೆ ಇದ್ದ ರೋಗಗಳಿಂದಲೇ ಉಂಟಾಗಿದೆ ಹೊರತು ಹೊಸ ಸಾಂಕ್ರಾಮಿಕ ರೋಗ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:
error: Content is protected !!