Mysore
16
clear sky

Social Media

ಶುಕ್ರವಾರ, 10 ಜನವರಿ 2025
Light
Dark

ಒಣ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿದ್ಧತೆ

ಕಸ ವಿಲೇವಾರಿಯಲ್ಲಿ ಸ್ವಾವಲಂಬನೆಯತ್ತ ಹೂಟಗಳ್ಳಿ ನಗರಸಭೆ

ಕೆ. ಪಿ. ಮದನ್
ಮೈಸೂರು: ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹೂಟಗಳ್ಳಿ ನಗರಸಭೆಯಲ್ಲಿ ಹಲವು ಹೊಸ ಯೋಜನೆಗಳು ರೂಪು ಗೊಳ್ಳುತ್ತಿದ್ದು, ಸದ್ಯ ತ್ಯಾಜ್ಯ ಸಂಸ್ಕರಣೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ೨೩ ಟನ್ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಸುಮಾರು ೮ ಟನ್ ಒಣ ಕಸವಿರುತ್ತದೆ. ಇದರ ವಿಲೇವಾರಿ ನಗರ ಸಭೆಗೆ ಸವಾಲಾಗಿತ್ತು. ಹಾಗಾಗಿ ಅಷ್ಟೂ ಒಣ ಕಸವನ್ನು ಮೈಸೂರು ನಗರಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸುವ ಮೂಲಕ ಸ್ವಚ್ಛತೆ ವಿಷಯದಲ್ಲಿ ನಗರಸಭೆ ಪರಾವಲಂಬಿಯಾಗಿತ್ತು.

ಈಗ ಒಣ ಕಸ ವಿಲೇವಾರಿಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ಹಿನಕಲ್ ವ್ಯಾಪ್ತಿಯ ಪ್ರದೇಶದಲ್ಲಿ ೧. ೦೫ ಕೋಟಿ ರೂ. ವೆಚ್ಚದಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ. ಘಟಕ ಸ್ಥಾಪನೆಯಾಗಲಿದ್ದು, ಇಲ್ಲಿ ಹೂಟಗಳ್ಳಿ ನಗರ ಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸದಿಂದ ಪ್ಲಾಸ್ಟಿಕ್, ಪೇಪರ್ ಮತ್ತಿತರ ವಸ್ತು ಗಳನ್ನು ಸಂಪೂರ್ಣವಾಗಿ ಬೇರ್ಪಡಿಸಿ ವಿಲೇವಾರಿ ಮಾಡಲು ಯೋಜನೆ ರೂಪಿಸ ಲಾಗಿದೆ. ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ.

೩೫ ಬಡಾವಣೆಗಳು: ೬೫ ಸಾವಿರ ಜನಸಂಖ್ಯೆ ಇರುವ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ನಾಲ್ಕು ಕೈಗಾರಿಕಾ ಪ್ರದೇಶಗಳೊಂದಿಗೆ ೩೫ ಬಡಾವಣೆಗಳು ಮತ್ತು ೧೦೦ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿವೆ. ಇಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ದೊಡ್ಡ ಸವಾಲಾಗಿತ್ತು. ನಿತ್ಯ ಕಸ ವಿಲೇವಾರಿಗೆ ಅಗತ್ಯ ಸಿಬ್ಬಂದಿ ನೇಮಕ ದೊಂದಿಗೆ ಪೂರಕವಾಗಿ ಸ್ವಚ್ಛತಾ ವಾಹನಗಳನ್ನು ಖರೀದಿ ಸಿರುವ ನಗರಸಭೆ ಅಽಕಾರಿಗಳು, ನಿತ್ಯ ೨೩ ಟನ್ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ೮ ಟನ್ ಒಣ ಕಸವನ್ನು ಹಿನಕಲ್‌ನಲ್ಲಿ ಆರಂಭಿಸ ಲಿರುವ ಘಟಕದಲ್ಲಿ ವಿಲೇವಾರಿ ಮಾಡಲಾಗು ತ್ತದೆ. ಅದರಿಂದ ನಗರಸಭೆಗೂ ಆದಾಯ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.

೧. ೦೫ ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆಯಾಗಲಿದ್ದು, ಹೂಟಗಳ್ಳಿ ನಗರಸಭೆ ವ್ಯಾಪಿ ಯಲ್ಲಿ ನಿತ್ಯ ಸಂಗ್ರಹವಾಗುವ ೨೩ ಟನ್ ಕಸದಲ್ಲಿ ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಇತರೆ ವಸ್ತುಗಳನ್ನು ಸಂಪೂರ್ಣವಾಗಿ ಬೇರ್ಪಡಿಸಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಪೂರಕವಾದ ಯಂತ್ರೋಪಕರಣ ಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ. -ಗಿರಿಜಾ, ಸಹಾಯಕ ಪರಿಸರ ಅಭಿಯಂತರರು, ಹೂಟಗಳ್ಳಿ ನಗರಸಭೆ

 

Tags: