Mysore
26
light rain

Social Media

ಶುಕ್ರವಾರ, 25 ಸೆಪ್ಟೆಂಬರ್ 2026
Light
Dark

ಡಿನ್ನರ್‌ ಪಾರ್ಟಿ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಈ ಹಿಂದೆ ಸಚಿವ ಸತೀಶ್‌ ಜಾರಕಿಹೊಳಿ ಆಯೋಜಿಸಿದ್ದ ಔತಣಕೂಣದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ನಾಳೆ ಔತಣಕೂಟ ಏರ್ಪಡಿಸಿದ್ದು, ಈ ಬಗ್ಗೆ ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು(ಜನವರಿ.7) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಏರ್ಪಡಿಸಿದ್ದ ಡಿನ್ನರ್‌ ಪಾರ್ಟಿಯಲ್ಲೂ ಸಹ ಸಿಎಂ ಸಿದ್ದರಾಮಯ್ಯ ಹೋಗಿ ಊಟ ಮಾಡಿದ್ದರು. ಅದರಂತೆಯೇ ನಾಳೆಯೂ(ಜ.8) ಕೂಡ ಪಕ್ಷದ ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರು ಮತ್ತು ಸಚಿವರೊಂದಿಗೆ ಡಿನ್ನರ್‌ ಪಾರ್ಟಿ ಆಯೋಜಿಸಲಾಗಿದೆ. ಹೀಗಾಗಿ ಈ ಪಾರ್ಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ.

ಇನ್ನೂ ಎಸ್‌ಸಿ, ಎಸ್‌ಟಿ ಸಮುದಾಯದ ವತಿಯಿಂದ ಸಮಾವೇಶ ನಡೆಸುವ ಉದ್ದೇಶವಿದೆ. ಹಾಗಾಗಿ ನಾಳೆ ಸಂಜೆ ಏಳು ಗಂಟೆಗೆ ಎಸ್‌ಸಿ ಮತ್ತು ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆ ಇದೆ. ಈ ಸಭೆ ಮುಗಿದ ನಂತರ ತಮ್ಮ ಮನೆಯಲ್ಲಿ ಡಿನ್ನರ್‌ ಪಾರ್ಟಿ ನಡೆಯಲಿದೆ ಎಂದು ತಿಳಿಸಿದ್ದಾರೆ.

 

Tags:
error: Content is protected !!