ಮಂಡ್ಯ: ತಾಲ್ಲೂಕಿನ ಕೀಲಾರ-ಆಲಕೆರೆ ಗ್ರಾಮಗಳ ನಡುವೆ ಇರುವ ರಸ್ತೆಯ ಬದಿಯಲ್ಲಿ ಪಿಕಪ್ ನಾಲೆ ಇದ್ದು, ತಡೆಗೋಡೆ ನಿರ್ಮಿಸಿಲ್ಲದ ಕಾರಣ ವಾಹನ ಸವಾರರು ಸ್ವಲ್ಪ ಯಾಮಾರಿದರೂ ನಾಲೆಗೆ ಬೀಳುವುದಂತೂ ಗ್ಯಾರಂಟಿ. ರಸ್ತೆಯ ಬದಿಯಲ್ಲಿರುವ ನಾಲೆಯಲ್ಲಿ ಗಿಡಗಂಟಿಗಳು ಬೆಳೆದು ನಾಲೆಯೇ ಕಾಣಿಸುತ್ತಿಲ್ಲ, ಅಪರಿಚಿತ ವಾಹನ ಸವಾರರು ಈ ರಸ್ತೆಯ ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನೀರು ಪಾಲಾಗುವುದು ಗ್ಯಾರಂಟಿ. ಆದ್ದರಿಂದ ಕಾಲುವೆ ಹೂಳು ತೆಗಿಸಿ, ರಸ್ತೆಯ ಬದಿಯ ನಾಲೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಬೇಕು. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನಿಸಿ ತಡೆಗೋಡೆ ನಿರ್ಮಿಸಲು ಮುಂದಾಗಬೇಕು.
-ಸಿ.ಸಿದ್ದರಾಜು, ಆಲಕೆರೆ, ಮಂಡ್ಯ