Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಾಳೆಯಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಅಧಿಕೃತ ತನಿಖೆ ಆರಂಭ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್‌ಪಿ ಅಲರ್ಟ್‌ ಆಗಿದ್ದು, ನಾಳೆಯಿಂದ ತನಿಖೆ ಆರಂಭಿಸಲಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಲರ್ಟ್‌ ಆಗಿರುವ ಲೋಕಾಯುಕ್ತ ಎಸ್‌ಪಿ ಅವರು, ಈಗಾಗಲೇ ಪ್ರಕರಣ ಕುರಿತು ತನಿಖೆ ನಡೆಸಲು ನಾಲ್ಕು ತಂಡ ರಚನೆ ಮಾಡಿದ್ದಾರೆ. ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಎ1 ಆರೋಪಿಯಾಗಿದ್ದು, ಸಿಎಂಗೆ ತನಿಖೆಯ ಟೆನ್ಷನ್‌ ಶುರುವಾಗಿದೆ ಎನ್ನಲಾಗಿದೆ.

ನಿನ್ನೆ ಹಾಗೂ ಇಂದು ಲೋಕಾಯುಕ್ತ ಕಚೇರಿಗೆ ರಜೆ ಇದ್ದು, ನಾಳೆಯಿಂದ ಅಧಿಕೃತ ತನಿಖೆ ಶುರುವಾಗಲಿದೆ. ಮುಡಾ ಹಗರಣದ ತನಿಖೆ ಕೊಂಚ ಚುರುಕಾಗಿಯೇ ನಡೆಯಲಿದೆ ಎನ್ನಲಾಗಿದ್ದು, ಸಿಎಂ ಮುಂದಿನ ನಡೆ ಬಗ್ಗೆ ಕುತೂಹಲ ಮನೆಮಾಡಿದೆ.

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಲಾಗಿದ್ದು, ಸಿಎಂಗೆ ಮತ್ತೊಂದು ಟೆನ್ಷನ್‌ ಶುರುವಾಗಿದೆ.

 

 

 

Tags: