Mysore
14
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ದಸರಾಗೆ ಮೆರಗು ನೀಡಲಿರುವ ಡ್ರೋನ್‌ ಶೋ: 2ದಿನ ಉಚಿತ ಶೋ

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೇ ಆರಂಭವಾಗಿದ್ದು, ಸಕಲ ಸಿದ್ದತೆಗಳು ಕೂಡ ಬರದಿಂದ ಸಾಗಿದೆ. ಕಳೆದ ಬಾರಿಯಂತೆ ಈ ಬಾರಿ ಜಿಲ್ಲಾಡಳಿತವು ವಿಶೇಷವಾಗಿ ಡ್ರೋನ್‌ ಶೋ ನಡೆಸಲು ನಿರ್ಧರಿಸಿದೆ.

ಅಕ್ಟೋಬರ್‌ 6, 7, 11 ಮತ್ತು 12 ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಡ್ರೋನ್‌ ಶೋ ನಡೆಯಲಿದೆ.

ಎರಡು ದಿನ ಉಚಿತ ಶೋ
ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಅನೇಕ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆಯೇ ಪ್ರವಾಸಿಗರನ್ನು ಆಕರ್ಷಿಸಲು 6 ಮತ್ತು 7 ರಂದು ರಾತ್ರಿ 8 ರಿಂದ 8.15 ರವರೆಗೆ ಉಚಿತ ಡ್ರೋನ್‌ ಶೋ ನಡೆಸಲು ತೀರ್ಮಾನಿಸಲಾಗಿದೆ.

ದಸರಾ ಮಹೋತ್ಸವ ಪ್ರಯುಕ್ತ ಯುವ ಸಂಭ್ರಮ, ಯುವ ದಸರಾ, ವಸ್ತು ಪ್ರದರ್ಶನ ಮತ್ತು ಆಹಾರ ಮೇಳದಂತೆ ಡ್ರೋನ್‌ ಶೋ ಸಹ ಜನತೆಯನ್ನು ಸೆಳೆಯುವ ಕಾರ್ಯಕ್ರಮವಾಗಿದೆ.

Tags:
error: Content is protected !!