Mysore
29
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಮಹಿಷ ದಸರಾಗೆ ಮುಂದಾದ್ರೆ ಚಾಮುಂಡಿ ಚಲೋ: ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ಯಾವುದೇ ಕಾರಣಕ್ಕೂ ಮಹಿಷ ದಸರಾ ನಡೆಯಲು ಬಿಡಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣ ಎಂದು ಸವಾಲು ಹಾಕಿದರು.

ಮಹಿಷನ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೇ ಪೂಜೆ ಮಾಡಿಕೊಳ್ಳಲಿ. ಹಿಂದೂ ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣ. ಮಹಿಷ ದಸರಾ ಹೆಸರಿನಲ್ಲಿ ಒಡಕು ಮೂಡಿಸಿಕೊಳ್ಳುವುದು ಬೇಡ. ಮಹಿಷ ದಸರಾ ಮಾಡಲು ಚಾಮುಂಡಿಬೆಟ್ಟ ಸರಿಯಾದ ಜಾಗ ಅಲ್ಲ ಎಂದರು.

ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಮಾಡುತ್ತೇವೆ ಎಂದರೆ ಚಾಮುಂಡಿ ಭಕ್ತರು ಕೂಡ ಅಂದೇ ಚಾಮುಂಡಿ ಚಲೋ ಮಾಡುತ್ತೇವೆ ಎಂದು ಸವಾಲು ಹಾಕಿದರು.

 

Tags:
error: Content is protected !!