Mysore
17
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಪ್ರಧಾನಿ ನರೇಂದ್ರ ಮೋದಿ ಮನೆಗೆ ಹೊಸ ಅತಿಥಿ ಆಗಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಕರುವಿನ ಜೊತೆ ಮೋದಿ ಕಳೆದ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗ್‌ ನಿವಾಸಕ್ಕೆ ಹೊಸ ಅತಿಥಿ ದೀಪಜ್ಯೋತಿ ಎಂಬ ಹೆಸರಿನ ಕರುವೊಂದು ಆಗಮಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ನಿವಾಸದಲ್ಲಿ ಗೋಮಾತೆ ಕರುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಕರುವನ್ನು ಮುದ್ದಾಡಿ ಅದರ ಜೊತೆ ಕಾಲ ಕಳೆಯುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದೆ. ಅರ ಹಣೆಯ ಮೇಲೆ ಬೆಳಕಿನ ಗುರುತು ಇದೆ. ಆದ್ದರಿಂದ ನಾನು ಅದಕ್ಕೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡು ಖುಷಿಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಕರುವನ್ನು ಹೊತ್ತುಕೊಂಡು ಹೋಗುತ್ತಿರುವುದು, ಪೂಜೆ ಮಾಡುವ ವೇಳೆ ಕರುವಿಗೆ ಹೂವಿನ ಹಾರ ಹಾಕುವುದು, ಅದನ್ನು ಎತ್ತಿ ಮುದ್ದಾಡುತ್ತಿರುವುದು, ಕರುವನ್ನು ತೋಟಕ್ಕೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯದ ಫೋಟೋಗಳನ್ನು ಸಹ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕುಪ್ರಾಣಿಗಳ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ಇದು ಸಾರಿ ಸಾರಿ ಹೇಳುತ್ತಿದ್ದು, ಟ್ವೀಟ್‌ನಲ್ಲಿ ಅಭಿಮಾನಿಗಳು ಕಮೆಂಟ್ಸ್‌ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

 

Tags:
error: Content is protected !!