Mysore
17
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಎಚ್.ಡಿ.ಕೋಟೆ ತಾಲ್ಲೂಕಿನ ಆನೆಮಾಳಕ್ಕೆ ದಿಢೀರ್‌ ಭೇಟಿ ನೀಡಿದ ಆಹಾರ ಸುರಕ್ಷತಾ ಅಧಿಕಾರಿ ಟಿ.ರವಿಕುಮಾರ್‌

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ತಾಲ್ಲೂಕಿನ ಕೇರಳ ಗಡಿ ಭಾಗವಾದ ಆನೆ ಮಾಳ ಗ್ರಾಮಕ್ಕೆ ದಿಢೀರ್‌ ಭೇಟಿ ನೀಡಿದ ಆಹಾರ ಸುರಕ್ಷತಾ ಅಧಿಕಾರಿ ಟಿ.ರವಿಕುಮಾರ್‌ ಅವರು, ಲೈಸೆನ್ಸ್‌ ಇಲ್ಲದ ಹೋಟೆಲ್‌ ಹಾಗೂ ಬೇಕರಿಗಳಿಗೆ ನೋಟಿಸ್‌ ನೀಡಿದ್ದಾರೆ.

ಈ ವೇಳೆ ಬೇಕರಿ ಮಾಲೀಕರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಅವರು, ಮಾಲೀಕರು ಹಾಗೂ ವ್ಯಾಪಾರಸ್ಥರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಒಳ್ಳೆಯ ಗುಣಮಟ್ಟದ ಆಹಾರವನ್ನು ನೀಡಬೇಕು.

ಯಾವುದೇ ಕಾರಣಕ್ಕೂ ನಿನ್ನೆ-ಮೊನ್ನೆ ಉಳಿದಿರುವ ಆಹಾರ, ಚಿಕನ್‌, ಮಟನ್‌, ಫಿಶ್‌ಗಳನ್ನು ನೀಡಬಾರದು.

ಚಿಕನ್‌, ಮಟನ್‌ ಹಾಗೂ ಫಿಶ್‌ನ್ನು ಕಟ್‌ ಮಾಡಿದ ನಂತರ ಪ್ಲಾಸ್ಟಿಕ್‌ ಕವರ್‌ನಿಂದ ಮುಚ್ಚಿಡಬೇಕು. ಯಾವುದೇ ಕಾರಣಕ್ಕೂ ನೊಣ ಹಾಗೂ ಇನ್ನಿತರ ಕೀಟಗಳು ಕೂರದ ಹಾಗೆ ನೋಡಿಕೊಳ್ಳಬೇಕು. ಹೋಟೆಲ್‌ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಇನ್ನೂ ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ಎಲ್ಲಾ ಹೋಟೆಲ್‌ ಮತ್ತು ಬೇಕರಿ ಮಾಲೀಕರು ಮತ್ತು ವ್ಯಾಪಾರಸ್ಥರು ಒಂದು ವಾರದ ಒಳಗೆ ಕಡ್ಡಾಯವಾಗಿ ಆಹಾರ ಪರವಾನಗಿ ಲೈಸೆನ್ಸ್‌ ಪಡೆಯಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್‌, ಸಿದ್ದರಾಜು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Tags:
error: Content is protected !!