Mysore
21
thunderstorm with rain

Social Media

ಶುಕ್ರವಾರ, 01 ಮೇ 2026
Light
Dark

ಕೊಳ್ಳೆಗಾಲ: ಸಾಲಾಭಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ

ಕೊಳ್ಳೆಗಾಲ/ಚಾಮರಾಜನಗರ: ಸಾಲಭಾದೆಯಿಂದ ದಂಪತಿ ಆಹ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.

ಕೊಳ್ಳೆಗಾಲದ ನಿವಾಸಿ ನಾಗೇಶ್(‌56)ಪತ್ನಿ ಸತ್ಯಲಕ್ಷ್ಮೀ(46)ಮೃತ ದಂಪತಿಗಳು. ದಂಪತಿಗಳು ಕಳೆದ ಆರು ತಿಂಗಳಿಂದ ಮೈಸೂರಿನಲ್ಲಿ ವಾಸವಾಗಿದ್ದರು. ಶನಿವಾರ(ಆ.18) ರಾತ್ರಿ ಕೊಳ್ಳೇಗಾಲಕ್ಕೆ ಬಂದಿದ್ದಾರೆ. ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಯು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕೊಳ್ಳೆಗಾಲ ಟೌನ್‌ ಪೊಲೀಶ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Tags:
error: Content is protected !!