Mysore
24
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ | ಅದ್ಭುತವಾಗಿ ಮೂಡಿಬಂದ ಸಂಗೀತ ಸಂಜೆ

ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್‌ ವತಿಯಿಂದ ಪ್ರಥಮ ಬಾರಿಗೆ ಮೈಸೂರು ಜಯರಾಂ ಅವರ ನೇತೃತ್ವದಲ್ಲಿ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುಭಾಷಾ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್ ಅವರ ಹಾಡುಗಳ ಸಂಗೀತ ಸಂಜೆ ಕಾರ್ಯಕ್ರಮ ಸಭಿಕರ ಕಿವಿಗಳನ್ನು ಇಂಪಾಗಿಸಿತು.

ಗಾಯಕರು ಯೇಸು ದಾಸ್ ಅವರು ಹಾಡಿರುವ ಜನಪ್ರಿಯ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಮಧುರವಾದ ಕಂಠಗಳಿಂದ ಪ್ರಸ್ತುತಪಡಿಸಿದರು. ಈ ಹಾಡುಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು. ಮೈಸೂರು ಜಯರಾಂ, ಮಹೇಂದ್ರ, ಬಾಲುಪ್ರಕಾಶ್, ಟಿ.ವಿ.ಎಸ್.ಕುಮಾರ್, ಸುರೇಶ್, ಡಾ. ಮಂಜುನಾಥ್‌, ಶ್ಯಾಮಸುಂದರ್, ಚಂದ್ರಶೇಖ‌, ತೇಜಸ್ವಿನಿ, ಜೆನಿಫರ್ ಹಾಗೂ ಶಶಿಕಲಾರವರು 30ಕ್ಕೂ ಅಧಿಕ ಕನ್ನಡ, ತಮಿಳು ಹಾಗೂ ಹಿಂದಿ ಚಲನಚಿತ್ರಗೀತೆಗಳನ್ನು ಹಾಡಿದರು. ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಮೈಸೂರು ಜಯರಾಂ ಅವರಿಗೆ ಧನ್ಯವಾದಗಳು.

ಸುಂದರಕೃಷ್ಣ, ವಿದ್ಯಾರಣ್ಯಪುರಂ, ಮೈಸೂರು.

Tags:
error: Content is protected !!