Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೊಡಗಿನ ಕೊಪ್ಪದಲ್ಲಿ ಮರದೆತ್ತರಕ್ಕೆ ಚಿಮ್ಮಿದ ನೀರು: ವೀಡಿಯೋ ವೈರಲ್‌

ಕೊಡಗು: ಜಿಲ್ಲೆಯ ಕುಶಾಲನಗರದ ಕೊಪ್ಪ ಬಳಿ ಕಾರಂಜಿಯಂತೆ ನೀರು ಉಕ್ಕುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಜಿಲ್ಲೆಯಾದ್ಯಂತ ಮುಂಗಾರು ಭಾರೀ ಚುರುಕಾಗಿದ್ದು, ಮಳೆಯ ರೌದ್ರ ನರ್ತನಕ್ಕೆ ಕೊಡಗು ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಈ ವೀಡಿಯೋ ಭಾರೀ ಸದ್ದು ಮಾಡುತ್ತಿದೆ.

ಈ ಬಗ್ಗೆ ʼಕೂರ್ಗ್‌ ದಿ ಕಾಶ್ಮೀರ್‌ ಆಫ್‌ ಕರ್ನಾಟಕʼ ಎಂಬ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೆಯಾಗಿದ್ದು, ನೀರು ಉಕ್ಕುತ್ತಿರುವ ದೃಶ್ಯ ಎಲ್ಲರ ಹುಬ್ಬೇರಿಸುವಂತಿದೆ.

ಆವರ್ತಿಯಿಂದ ಮುಳಸೋಗೆ ಮಾರ್ಗದ ರಸ್ತೆ ಬದಿಯಲ್ಲಿ ನೀರು ಉಕ್ಕುತ್ತಿರುವ ದೃಶ್ಯ ಕಂಡುಬಂದಿದೆ. ಒಂದು ಮರದ ಎತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಉಕ್ಕಿ ಹರಿಯುತ್ತಿರುವ ನೀರು ನದಿಗೆ ಸೇರುತ್ತಿದ್ದು, ಈ ಭಾಗದಲ್ಲಿ ಕೆಲಕಾಲ ಪ್ರಯಾಣ ಸ್ಥಗಿತವಾಗಿತ್ತು.

ಮಳೆ ನೀರಿನಿಂದ ಭೂಮಿಯಲ್ಲಿ ಚಿಮ್ಮಿರಬಹುದು ಎಂದು ಕೆಲವರು ಹೇಳಿದರೇ, ಮತ್ತೆ ಕೆಲವರು ಕೆರೆಗಳಿಗೆ ನೀರು ತುಂಬಿಸುವ ಪೈಪ್‌ ಹೊಡೆದು ಹೋಗಿದ್ದು, ನೀರು ಮರದೆತ್ತರಕ್ಕೆ ಚಿಮ್ಮುತ್ತಿದೆ ಆ ಮೂಲಕ ನೀರು ಪೋಲಾಗುತ್ತಿದೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

Tags: