Mysore
26
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಸ್ವಂತಕ್ಕೆ ಬರೆದುಕೊಂಡ ಟಿಪಣಿ ಸಾಲುಗಳು

  • ಪ್ರಶಸ್ತಿಗಾಗಿ ಬರೆಯುವುದಲ್ಲ. ಕಥೆ, ಕವಿತೆ, ಬರಹ ಹುಟ್ಟುವುದು ಜನಗಳ ನಡುವೆ! ನಮ್ಮ ದೃಷ್ಟಿ ಇರಬೇಕಾಗಿದ್ದು ಅಲ್ಲಿಯೇ ಹೊರತು ಫೇಸ್ಟುಕ್ ಹರಟೆ ಕಟ್ಟೆಗಳಲ್ಲಿ ಅಲ್ಲ.

    ದಾದಾಪೀರ್ ಜೈಮನ್

ಒಂಥರಾ ಒತ್ತಡದಲ್ಲಿದ್ದೇನೆ. ಈ ಹಿಂದಿನ ತಲೆ ಮಾರು ಈ ಒತ್ತಡವನ್ನು ಹಾಯಲೇ ಇಲ್ಲವೇ ಎನ್ನುವುದೂ ಕೂಡ ನನ್ನನ್ನು ಕಾಡುವ ಪ್ರಶ್ನೆಗಳಲ್ಲಿ ಒಂದು ಒಂದು ಕಡೆ ಅರುಂಧತಿ ರಾಯ್‌ಗೆ ಪೆನ್ ಪಿಂಟರ್ ಪ್ರೈಜ್ ಬಂದಿದೆ. ಆಡಬೇಕಾದ ಮಾತುಗಳನ್ನು ನಿರ್ಭೀತವಾಗಿ ಆಡುವ ಧೈರ್ಯ ಮತ್ತು ಬರಹಗಳಿಗಾಗಿ ಬಂದಿರುವ ಪ್ರಶಸ್ತಿಯು ಎಲ್ಲಾ ಬರಹಗಾರರಿಗೂ ಹುಮ್ಮಸ್ಸು ಮತ್ತು ಧೈರ್ಯ ತುಂಬಬೇಕಾಗಿದ್ದ ಹೊತ್ತು. ಅರುಂಧತಿ ರಾಯ್ ಮತ್ತು ಇತರ ಪ್ರಗತಿಪರ ಬರಹ ಗಾರರು ಎದುರಿಸುತ್ತಿರುವುದು ಬರವಣಿಗೆಯಲ್ಲಿ ಎದು ರಾಗಬಹುದಾದ ಹೊರಗಿನ ಸವಾಲುಗಳನ್ನು! ಪ್ರಭುತ್ವದ ನಿಯಂತ್ರಣ ಗಳನ್ನು! ಇದೇ ಹೊತ್ತಿ ನಲ್ಲಿ ಫೇಸ್ಟುಕ್ ಮತ್ತು ಇತರ ಸಾಮಾಜಿಕ ಜಾಲ ತಾಣ ಕಟ್ಟೆಗಳಲ್ಲಿ ಒಳಗಿನಿಂದಲೇ ನಾವೊಂದಿಷ್ಟು ನಿಯಂತ್ರಣ ಗಳನ್ನು ಹಾಕಿಕೊಂಡಿದ್ದೇವೆ. ಮನುಷ್ಯ ಮನುಷ್ಯರು ಸಂವಾದಿಸಲಾಗದಷ್ಟು ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಒಮ್ಮೊಮ್ಮೆ ಯಾರದೋ ದಾಳದ ಗೊಂಬೆಗಳೂ ಆಗುತ್ತಿದ್ದೇವೆ. ಯಾರದೋ ಕಹಿಗೆ ಸಿಕ್ಕಿ ನಜ್ಜು ಗುಜ್ಜಾಗುತ್ತಿದ್ದೇವೆ.

ಹಿರಿಯರ ಕೆಲವು ವಿವೇಕದ ವಾಣಿಗಳು ಮತ್ತು ಸ್ವಂತಕ್ಕೆ ಯೋಚಿಸುವಾಗ ಹೊಳೆದ ಒಂದಿಷ್ಟನ್ನು ನನಗೆ ನಾನೇ ಪಟ್ಟಿ ಮಾಡಿಕೊಂಡಿರುವೆ. ಇದು ನನ್ನ ಸಮಾಧಾನಕ್ಕೆ ನಾನೇ ಮಾಡಿಟ್ಟುಕೊಂಡ ಟಿಪ್ಪಣಿಗಳು.

• ಪ್ರಶಸ್ತಿಗಳು ನಮಗೆ ಗ್ಲುಕೋಸ್ ಇದ್ದಂತೆ. ಅದನ್ನ ತೆಗೆದುಕೊಂಡು ಮತ್ತೆ ಮುಂದಕ್ಕೆ ಬರೆಯುತ್ತಿರ ಬೇಕು. ಈ ಸ್ಪರ್ಧೆಗಳು, ಮಾರುಕಟ್ಟೆಯ ಆಮಿಷ ಗಳು, ಪ್ರಶಸ್ತಿಗಳಿಂದ ನಮ್ಮ ಕವಿತ್ವವನ್ನು ಕವಿತೆ ಯನ್ನು ನಾವು ಕಾಪಾಡಿಕೊಳ್ಳುವುದು ಬರಹ ಗಾರರಾದ ನಮ್ಮ ಎಚ್ಚರವೇ ಹೌದು. ಅಷ್ಟಕ್ಕೂ ಯಾವ ಕಥೆ ಶ್ರೇಷ್ಠ, ಯಾವುದಲ್ಲ ಎಂಬುದನ್ನು ನಾವು ಹೇಗೆ ಅಳೆಯಲಿಕ್ಕಾಗುತ್ತದೆ?

• ಕುವೆಂಪು, ಕೀರ್ತಿಯನ್ನು ಶನಿ ಎಂದರು. ವಯಸ್ಸಲ್ಲದ ವಯಸ್ಸಲ್ಲಿ ಧುಮ್ಮಿಕ್ಕಿ ಬರುವ ಕೀರ್ತಿಯನ್ನು ನಿಭಾಯಿಸುವುದು ಹೇಗೆ? ನಮ್ಮಲ್ಲಿ ಕೀರ್ತಿಯನ್ನು ನಿಭಾಯಿಸಲಾಗದೆ ಭ್ರಮೆಗಳ ಹೊಳೆಯಲ್ಲಿ ಕೊಚ್ಚಿಕೊಂಡು ಹೋದವರು ಸುಮಾರು ಜನ ಇದ್ದಾರೆ. ಕೀರ್ತಿ ಬರುತ್ತದೆ ಹೋಗುತ್ತದೆ. ಬರಹ ಮಾತ್ರ ನಮ್ಮ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.

• ಪ್ರಶಸ್ತಿಗಾಗಿ ಬರೆಯುವುದಲ್ಲ. ಕಥೆ, ಕವಿತ ಬರಹ ಹುಟ್ಟುವುದು ಜನಗಳ ನಡುವೆ! ಜನರ ಜೀವನ, ಮನುಕುಲದ ತಲ್ಲಣ, ಸಂಘರ್ಷ ಗಳನ್ನು ಹಿಡಿದು ಅದನ್ನು ಭಾಷೆಯ ಮೂಲಕ ಶೋಧಿಸಬೇಕು. ನಮ್ಮ ದೃಷ್ಟಿ ಇರಬೇಕಾಗಿದ್ದು, ಅಲ್ಲಿಯೇ ಹೊರತು ಫೇಸ್ಟುಕ್ ಮುಂತಾದ ಮಾರುಕಟ್ಟೆಯ ವೇದಿಕೆ ಮತ್ತು ಹರಟೆ ಕಟ್ಟೆಗಳಲ್ಲಿ ಅಲ್ಲ. ಈ ಒಂದು ಕೃತಿಯನ್ನು ಯಾವುದೇ ಪೂರ್ವಗ್ರಹವಿಲ್ಲದೆ ಓದುವುದನ್ನು ರೂಢಿಸಿಕೊಳ್ಳಬೇಕು. ಓದುವುದು ನಿಂತಾಗ ಬರೆಯುವುದೂ ನಿಲ್ಲುತ್ತದೆ.

• ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ ಬರಿ ಓದು ಮತ್ತು ಬರಹ ಮಾತ್ರ ನಮ್ಮ ಬರವಣಿಗೆಯನ್ನು ಸೀಮಿತಗೊಳಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ನಾಟಕ, ಸಿನಿಮಾ ಮತ್ತು ಇತರೆ ಕಲಾ ಪ್ರದರ್ಶನಗಳನ್ನು ಗಮನಿಸುವುದೂ ತುಂಬಾ ಮುಖ್ಯ ಎಂದು ನನಗಂತೂ ಅನಿಸಿದೆ.

• ನಾವು ನಮ್ಮದೇ ಭಜನಾ ಮಂಡಳಿಗಳನ್ನು ಕಟ್ಟಿಕೊಂಡು ಉಳಿದುಬಿಡುವುದಕ್ಕಿಂತ ಬೇರೊಂದು ಭಾಷೆಯಲ್ಲಿ ಅಲ್ಲಿನ ಬರಹ ಗಾರರು ಕಲಾವಿದರು ಅಲ್ಲಿನ ಸಾಮಾಜಿಕ, ರಾಜಕೀಯ ಮಾನವ ಬದುಕಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದರ ಕುರಿತೂ ನಮ್ಮ ಗಮನ ಇರಬೇಕು. ಇಂದಿನ ಕಾಲಘಟ್ಟದಲ್ಲಿ ಲಿಟರರಿ ಫೆಸ್ಟಿವಲ್ಲುಗಳ ಸಂವಾದಗಳನ್ನು ಈ ನಿಟ್ಟಿನಲ್ಲಿ ನೋಡಬಹುದು!

ಕನ್ನಡ ಸಾಹಿತ್ಯ ಲೋಕದ ಘನ ಪರಂಪರೆಯ ಜೀವಸತ್ವವನ್ನು ಹೀರಿಕೊಳ್ಳುತ್ತಾ ತಪ್ಪಾದರೂ ಸರಿಯೇ ನಾನು ನನ್ನ ನಿರ್ಧಾರಕ್ಕೇ ಅಂಟಿಕೊಳ್ಳುತ್ತೇನೆ ಎನ್ನುವುದು ಕಲಾವಿದನ ಘನತೆಯನ್ನು ಎತ್ತಿ ಹಿಡಿಯುತ್ತದೆ. ಅದೇ ನಾವು ಆಡುವ ಹೊತ್ತಲ್ಲಿ ಆಡಬೇಕಾದ ಧೈರ್ಯವನ್ನು ತರುತ್ತದೆ. ಪ್ರಭುತ್ವವನ್ನೂ ಸೇರಿದಂತೆ, ಹೊರಗಿನ, ಮಾರುಕಟ್ಟೆಯ ಆಮಿಷಗಳನ್ನು ಕಣ್ಣ ಎದುರಿಗೆ ಕಾಣಿಸುತ್ತದೆ.

• ಕಡೆಗೂ ಬರಹಗಾರ ಕೇವಲ ವಿಮರ್ಶಕನಲ್ಲ, ಕೇವಲ ಹೋರಾಟಗಾರನಲ್ಲ, ಕೇವಲ ಪತ್ರಕರ್ತನಲ್ಲ ಮತ್ತು ಇವೆಲ್ಲಾ ಆಗಿಯೂ ಮತ್ತೇನೋ ಒಂದಾಗಿ ಅದು ನಮ್ಮ ಬರಹದ ಮೂಲಕ ಹೊಮ್ಮಬೇಕಲ್ಲಾ? ಅದು ಏನು ಎನ್ನುವುದನ್ನು ನಮನಾವು ಮತ್ತೆ ಮತ್ತೆ ಕೇಳಿಕೊಳ್ಳಬೇಕಾಗುತ್ತದೆ.

• ಬರಹಗಾರರು ಅದರಲ್ಲೂ ಸೃಜನಶೀಲ ಬರಹಗಾರರಿಗೆ ಬಂಡೇಳುವ ಅರಾಜಕ ವ್ಯಕ್ತಿತ್ವ ಇದ್ದೆ ಇರಬೇಕು ಇಲ್ಲವಾದರೆ ಅದನ್ನು ರೂಢಿಸಿಕೊಳ್ಳಬೇಕು. ಇದನ್ನು ಇಟ್ಟುಕೊಂಡೂ ಕೂಡ ನಾವು ಚರ್ಚೆಯಲ್ಲಿ ಮಾತುಕತೆಯಲ್ಲಿ ಘನತೆ ಮತ್ತು ವಿನಯವನ್ನು
ರೂಢಿಸಿಕೊಳ್ಳಬೇಕು. ಈ ಎರಡೂ ಅಂಶಗಳಲ್ಲಿ ಯಾವ ಒಂದು ಕಡಿಮೆ ಎನಿಸಿದರೂ ನಾವು ಜನತೆಯ ಮುಂದೆ ನಗೆಪಾಟಲಾಗುತ್ತೇವೆ. ಯಾರದೋ ಜಾಲದ ಕೈಗೊಂಬೆ ಆಗಿರುತ್ತೇವೆ.

• ಮನುಷ್ಯ ಸಂವಾದಗಳು ಆಗುವ ಜಾಗಗಳನ್ನು ನಾವು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಿರಬೇಕು. ಜತನದಿಂದ ಉಳಿಸಿಕೊಳ್ಳುತ್ತಿರಬೇಕು.

Tags: