Mysore
27
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಸಿದ್ದರಾಮಯ್ಯ ಮುಗಿಸುವುದಕ್ಕೆ ಕಾಂಗ್ರೆಸ್ ನಿಂದಲೇ ಸಾಕಷ್ಟು ಪಿತೂರಿ ನಡೆದಿದೆ ; ಕುಮಾರಸ್ವಾಮಿ

ಮಂಡ್ಯ : ಸಿಎಂ ಸಿದ್ದರಾಮಯ್ಯರನ್ನ ಮುಗಿಸುವುದಕ್ಕೆ ಕಾಂಗ್ರೆಸ್‌ ನಿಂದಲೇ ಸಾಕಷ್ಟು ಪಿತೂರಿ ನಡೆದಿದೆ . ಇಷ್ಟು ದಿನ ಇಲ್ಲದ ಮುಡಾ ಹಗರಣ ಈ ಯಾಕೆ ಹೊರಗೆ ಬಂದಿದೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮಂಡ್ಯದಲ್ಲಿ ಮುಡಾ ಹಗರಣ ವಿಚಾರಕ್ಕೆ ಸಂಬಂಧಪಪಟ್ಟಂತೆ ಮಾತನಾಡಿದ ಅವರು, ಮೈಸೂರು ಮುಡಾ ಹಗರಣ ಹಳೆಯ ಸುದ್ದಿ. ಈ ಹಗರಣ ದೊಡ್ಡ ಪ್ರಚಾರ ಪಡೆಯುವುದರ ಹಿಂದೆ ಕಾಂಗ್ರೆಸ್ಸಿಗರ ಸಂಚು ಇದೆ. ಸಿಎಂ ಸ್ಥಾನಕ್ಕಾಗಿ ಆಸೆ ಪಟ್ಟು, ಟವೆಲ್‌ ಹಾಸಿ ಕುಳಿತಿರುವವರ ಕೈವಾಡವಿದೆ. ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ತೆಗೆದು ಸಿಎಂ ನಾವಾಗಬೇಕೆಂದು ಕಾಯುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ  ಡಿಕೆ ಶಿವಕುಮಾರ್‌ ವಿರುದ್ಧ ಆರೋಪ ಮಾಡಿದರು.

ಅಲ್ಲದೆ ಸಿದ್ದರಾಮಯ್ಯ ಇಮೇಜ್‌ ಹಾಳು ಮಾಡಲು ಪ್ಲಾನ್‌ ಮಾಡಿದ್ದಾರೆ. ಮುಡಾದಲ್ಲಿ ಸಿಎಂ ಮಾಡಿರುವ ವ್ಯವಹಾರಗಳ ದಾಖಲಾತಿ ತೆಗೆದು ವಕೀಲರನ್ನ ಇಟ್ಟು ಸಿಎಂ ಮುಗಿಸಲಿಕ್ಕೆ ಪಿತೂರಿ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಎಂದು ಎಚ್‌ ಡಿಕೆ ಹೇಳಿದರು.

Tags:
error: Content is protected !!