Mysore
17
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಕರಾವಳಿಯಲ್ಲಿ ವರುಣಾರ್ಭಟ: ಅವಾಂತರ ಸೃಷ್ಟಿಸಿದ ಜೋರು ಮಳೆ

ಉಡುಪಿ: ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಅವಾಂತರವನ್ನೇ ಸೃಷ್ಟಸಿದೆ.

ಕೊಡಗು, ಉಡುಪಿ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದೈದು ದಿನಗಳಿಂದ ನಿರಂತರ ಜೋರು ಮಳೆ ಸುರಿಯುತ್ತಿದ್ದು, ಮಳೆಯಿಂದ ಕೆಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿದೆ. ಬ್ರಹ್ಮಾವರದ ಅರೂರು ಮತ್ತು ಬೆಳ್ಳಾರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಜೋರು ಮಳೆ ಪರಿಣಾಮ ಹೊಳೆಗಳು ಉಕ್ಕಿಹರಿದು ತಗ್ಗು ಪ್ರದೇಶಗಳಿಗೆ ನೀರು ಹರಿಯುತ್ತಿದೆ. ಪರಿಣಾಮ ಎಲ್ಲಾವು ಜಲಾವೃತಗೊಂಡಿವೆ.

ಜೋರು ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದ ನೂರಾರು ಮರಗಳು ಧರೆಗುರುಳಿದ್ದು, ಕುಂದಾಪುರ ಕಮಲಶಿಲೆ ದೇವಾಲಯವು ಕೂಡ ಜಲಾವೃತಗೊಂಡಿದೆ. ದೇವಾಲಯದ ಪಕ್ಕದಲ್ಲೇ ಹರಿಯುತ್ತಿರುವ ವಾರಾಹಿ ಉಪನದಿ ಕುಬ್ಜೆ ನದಿಯು ಉಕ್ಕಿ ಹರಿದು ದೇವಾಲಯ ಗರ್ಭಗುಡಿ ಪ್ರವೇಶಿಸಿದೆ. ಪ್ರಮುಖವಾಗಿ ಉದ್ಭವ ಬ್ರಾಹ್ಮೀ ದುರ್ಗಾಪರಮೇಶ್ವರಿ ಲಿಂಗವು ಸಂಪೂರ್ಣ ಮುಳುಗಿದೆ.

ತಗ್ಗುಪ್ರದೇಶಗಳಲ್ಲಿರುವ ಜನರನ್ನು ಮುಂಜಾಗ್ರತೆಯ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಭರದಿಂದ ಸಾಗುತ್ತಿದೆ. ಜೊತೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆ.

Tags:
error: Content is protected !!