Mysore
20
overcast clouds

Social Media

ಶುಕ್ರವಾರ, 25 ಸೆಪ್ಟೆಂಬರ್ 2026
Light
Dark

ನೀವು ಒಪ್ಪಿದರೆ ನಾನೇ ಅಭ್ಯರ್ಥಿ, ಇಲ್ಲವಾದಲ್ಲಿ ನಿಖಿಲ್ ಗೆ ಬೆಂಬಲ ಕೊಡ್ತೀನಿ: ಎಚ್.ಡಿಕೆ ಬಳಿ ಸಿ.ಪಿ ಯೋಗೇಶ್ವರ್ ಹೇಳಿಕೆ

ನವದೆಹಲಿ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಭಾನುವಾರ ರಾತ್ರಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೆ ಒಂದು ವಾರದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಪಷ್ಟತೆ ನೀಡುವಂತೆ ಕುಮಾರಸ್ವಾಮಿ ಬಳಿ ಯೋಗೇಶ್ವರ್‌ ಕೇಳಿಕೊಂಡಿದ್ದಾರೆ.

ನೀವು ಒಪ್ಪಿದರೆ ನಾನೇ ಅಭ್ಯರ್ಥಿಯಾಗುತ್ತೇನೆ .ಇಲ್ಲವಾದಲ್ಲಿ ನಿಖಿಲ್‌ ಅಭ್ಯರ್ಥಿಯಾದರೂ ನಾನು ಬೆಂಬಲ ನೀಡುತ್ತೇನೆ. ನೀವೇ  ಮುಂದೆ ನಿಂತು ಉಪಚುನಾವಣೆ ನಡೆಸಬೇಕು. ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಪಕ್ಷ ತಯಾರಿ ಆರಂಭಿಸಿದೆ. ಅಭ್ಯರ್ಥಿಯನ್ನು ಬೇಗ ಘೋಷಿಸಿದರೆ ನಾವು ಸಿದ್ಧತೆ ಆರಂಭಿಸಬಹುದು ಎಂದು ಯೋಗೇಶ್ವರ್ ಹೇಳಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಮಾತನಾಡಿ, ಈ ವಾರ ಬೆಂಗಳೂರಿಗೆ ಬರುತ್ತೇನೆ. ಮತ್ತೊಮ್ಮೆ ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿದ್ದಾರೆ

Tags:
error: Content is protected !!