Mysore
29
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಮಂಡ್ಯ: ಅನೈತಿಕ ಸಂಬಂಧ ಶಂಕೆ, ದೊಡ್ಡಮ್ಮನನ್ನೇ ಹತ್ಯೆ ಮಾಡಿದ ಮಗ

ಮಂಡ್ಯ: ಅನೈತಿಕ ಸಂಬಂಧ ಶಂಕೆ ಹಿನ್ನೆಲೇ ಚಾಕುವಿನಿಂದ ದೊಡ್ಡಮ್ಮನ ಕತ್ತು ಕುಯ್ದು ಹತ್ಯೆ ಮಾಡಿದ ಘಟನೆ ನಗರದ ಆನೆಕೆರೆ ಬೀದಿಯಲ್ಲಿ ನಡೆದಿದೆ.

ವೃದ್ಧೆ ಕೆಂಪಮ್ಮ(80) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಹರೀಶ್(‌34). ಎಂಬಾತ ತನ್ನ ತಂದೆಯೊಂದಿಗೆ ವಾಸವಿದ್ದ ದೊಡ್ಡಮ್ಮನನ್ನು ಹತ್ಯೆ ಮಾಡಿ ಬಳಿಕ, ಪೊಲೀಸರಿಗೆ ಶರಣಾಗಿದ್ದಾನೆ.

ಮೃತ ವೃದ್ಧೆ ಕೆಂಪಮ್ಮ ಗಂಡ ತೀರಿಹೋದ ನಂತರ ಆರೋಪಿಯ ತಂದೆ ರಾಮಕೃಷ್ಣ ಆಸರೆ ನೀಡಿ, ಹಲವು ವರ್ಷಗಳಿಂದ ಜೊತೆಗೆ ವಾಸವಾಗಿದ್ದರು. ಆರೋಪಿ ಹರೀಶ್‌ ತಂದೆ ತಾಯಿ ಬೇರೆಯಾಗಲೂ ಕೆಂಪಮ್ಮ ಕಾರಣ ಎಂಬ ದ್ವೇಷ ಕೂಡ ಇತ್ತು. ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆದು ಕೊನೆಗೆ ದೊಡ್ಡಮ್ಮನ್ನು ಹರೀಶ್‌ ಹತ್ಯೆ ಮಾಡಿದ್ದಾನೆ. ಬಳಿಕ ತಂದೆ ರಾಮಕೃಷ್ಣಗೆ ಕೆಂಪಮ್ಮನನ್ನು ಕೊಲೆಯ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಎಸ್‌ಪಿ ಯತೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಡ್ಯ ಸೆಂಟ್ರಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Tags:
error: Content is protected !!