Mysore
33
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಡಿ ಬಾಸ್‌ಗೆ ಮತ್ತೊಂದು ಸಂಕಷ್ಟ: ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲು?

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ದರ್ಶನ್‌ ಬಂಧನವಾಗಿದ್ದು ವಿಚಾರಣೆ ನಡೆಯುತ್ತಿದೆ.

ಇದರ ಬೆನ್ನಲ್ಲೇ ಡಿ ಗ್ಯಾಂಗ್‌ಗೆ ಮತ್ತೊಂದು ಸಂಕಟ ಎದುರಾಗಿದ್ದು, ದರ್ಶನ್‌ ಅವರು 10 ವರ್ಷಗಳ ಹಿಂದೆ ದರ್ಶನ್‌ ಬಳಿ ಸಹಾಯಕ್ಕಾಗಿ ಹೋಗಿದ್ದ ಸಂತ್ರಸ್ತನ ಮೇಲೆ ಹಲ್ಲೆ ಸಂಬಂಧ ದೂರು ದಾಖಲಾಗಿದೆ.

ಈ ಸಂಬಂಧ ಕನ್ನಡದ ಖಾಸಗಿ ವಾಹಿನಿ ಟಿವಿ9 ವರದಿ ಮಾಡಿದ್ದು, 10 ವರ್ಷಗಳ ಹಿಂದಿನ ಹಲ್ಲೆ ವಿರುದ್ಧ ಟಿವಿ9 ವಾಹಿನಿಯಲ್ಲಿ ನ್ಯಾಯಕ್ಕಾಗಿ ಸಂತ್ರಸ್ಥೆ ಕುಟುಂಬ ತಮ್ಮ ಅಳಲನ್ನು ತೋಡಿಕೊಂಡಿದೆ.

ನಟ ದರ್ಶನ್‌ ತಮ್ಮ ಮೈಸೂರಿನ ಫಾರ್ಮ್‌ಹೌಸ್‌ಗೆ ಪರಿಹಾರ ಕೇಳಲು ಬಂದ ಸಂತ್ರಸ್ತನ ಮೇಲೆ ನಾಯಿಯಿಂದ ದಾಳಿ ಮಾಡಿಸಿ ವಿಕೃತ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ನಿಜಲಿಂಗಪುರದ ಮಹೇಶ್‌ ಎಂಬುವವರೇ ದರ್ಶನ್‌ರಿಂದ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ದರ್ಶನ್‌ ಅವರ ವಿನೀಶ್‌ ದರ್ಶನ್‌ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತದ್ದ ಮಹೇಶ್‌ಗೆ ಎತ್ತು ತನ್ನ ಕೊಂಬಿನಿಂದ ತಿವಿದಿತ್ತು. ಪರಿಣಾಮ ಅವರ ಕಣ್ಣಿಗೆ ಪೆಟ್ಟಾಗಿದ್ದು, ಡಿ ಗ್ಯಾಂಗ್‌ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆ ಒದಗಿಸಿ ಮಹೇಶ್‌ ಅವರ ಮನೆಗೆ ಕರೆದೊಯ್ದು ಬಿಟ್ಟಿದ್ದಾರೆ.

ಇದಾದ ನಂತರ ದರ್ಶನ್‌ ಅವರ ಮನೆ ಕಡೆ ಮತ್ತೆಂದು ಮುಖ ಹಾಕಿಲ್ಲ. ಮಹೇಶ್‌ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬ ದರ್ಶನ್‌ ಅವರ ಫಾರ್ಮ್‌ಹೌಸ್‌ಗೆ ತೆರಳಿ ಪರಿಹಾರಕ್ಕಾಗಿ ಕೈಚಾಚಿದ್ದಾರೆ. ಇದನ್ನು ಕೀಳಾಗಿ ಕಂಡ ಡಿ ಗ್ಯಾಂಗ್‌ ತಮ್ಮ ಸಾಕು ನಾಯಿಗಳನ್ನು ಸಂತ್ರಸ್ತ ಕುಟುಂಬದವರ ಮೇಲೆ ದಾಳಿ ಮಾಡಲು ಬಿಡುತ್ತಿದ್ದರಂತೆ. ಸ್ವಲ್ಪ ದಿನಗಳ ಬಳಿಕ ಮೈಸೂರಿನ ಖಾಸಗಿ ಹೋಟೆಲ್‌ಕೆ ಬರಹೇಳಿ ಅಲ್ಲಿ ಸ್ಥಳೀಯ ರೌಡಿಗಳಿಂದ ಬೆದರಿಕೆ ಹಾಕಿದ್ದು, ಈ ವಿಚಾರ ಹೊರಗೆ ಬಾಯಿ ಬಿಟ್ಟರೇ ಸುಮ್ಮನೇ ಬಿಡುವುದಿಲ್ಲ ಎಂದು ಗದರಿಸಿದ್ದರು ಎಂದು ಸಂತ್ರಸ್ತರ ಕುಟುಂಬ ಖಾಸಗಿ ವಾಹಿನಿಯಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.

Tags:
error: Content is protected !!