Mysore
26
broken clouds

Social Media

ಗುರುವಾರ, 09 ಏಪ್ರಿಲ 2026
Light
Dark

ಪ್ರಜ್ವಲ್‌ ಅಶ್ಲೀಲ ವಿಡಿಯೋ ಪ್ರಕರಣ: 30ಕ್ಕೂ ಹೆಚ್ಚು ಸಂತ್ರಸ್ಥೆಯರಿಂದ ಎಸ್‌ಐಟಿಗೆ ಕರೆ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಸಂತ್ರಸ್ಥೆಯರಿಗೆ ಎಸ್‌ಐಟಿ ಸಹಾಯವಾಣಿ ಆರಂಭಿಸಿದ್ದು(6360938947), ಸಹಾಯವಾಣಿಗೆ ಪ್ರತಿನಿತ್ಯವು ಕರೆಗಳು ಬರುತ್ತಿದೆ. ಈವರೆಗೆ 30 ಕ್ಕೂ ಹೆಚ್ಚು  ಕರೆಗಳು ಬಂದಿದೆ ಎಂದು ಎಸ್‌ಐಟಿ ಮಾಹಿತಿ ನೀಡಿದೆ.

ಕರೆ ಮಾಡುತ್ತಿರುವ ಸಂತ್ರಸ್ಥೆಯರು ಇದೂವರೆಗೆ ದೂರು ನೀಡಿಲ್ಲ. ಹೀಗಾಗಿ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡುವಂತೆ ಎಸ್‌ಐಟಿ ಕೋರಿದೆ. ಸಂತ್ರಸ್ಥೆ ಮಹಿಳೆಯರು ದೂರು ನೀಡಿದರೆ ಮಾಹಿತ ಸಂಗ್ರಹಿಸುತ್ತೇವೆ. ದೂರುದಾರರ ಗುರುತು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್‌ಐಟಿ ಭರವಸೆ ನೀಡಿದೆ.

ಸಹಾಯವಾಣಿಗೆ ಕರೆ ಮಾಡಲು ಆಗಲಿಲ್ಲವೆಂದರೆ ನೇರವಾಗಿ ಅಧಿಕಾರಿಗಳನ್ನು ಭೇಟಿ  ಮಾಡಿ ದೂರು ನೀಡಬಹುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜ್ವಲ್‌ ವಿರುದ್ಧ  ಮೂರು ಪ್ರಕರಣ ದಾಖಲಾಗಿದ್ದು. ಸಹಾಯವಾಣಿಗೆ ಕರೆ ಮಾಡಿ  ನೀಡುತ್ತಿರುವ ಸಂತ್ರಸ್ಥ ಮಹಿಳೆಯರ ಹೇಳಿಕೆಗಳನ್ನು ಪರಿಗಣಿಸುತ್ತಿದೆ.

Tags:
error: Content is protected !!