ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್ ಟೈಟನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಇದು ಪ್ಲೇಆಫ್ ಕನಸು ಕಂಡಿದ್ದ ಗುಜರಾತ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಇನ್ನು ಪಂದ್ಯ ರದ್ದಾಗಿದ್ದರಿಂದ ಇತ್ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಲಾಗಿದೆ.
ಈ ಪಂದ್ಯ ರದ್ದಾಗುವ ಮೂಲಕ ಜಿಟಿ ಪ್ಲೇಆಫ್‌ನಿಂದ ಹೊರ ಬಿದ್ದಿತು. ಆ ಮೂಲಕ ಐಪಿಎಲ್ ಸೀನಸ್ 17ರ ಪಯಣ ಇಲ್ಲಿಗೆ ಅಂತ್ಯಗೊಂಡಿದೆ. ಇನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.