Mysore
27
overcast clouds

Social Media

ಶನಿವಾರ, 10 ಅಕ್ಟೋಬರ್ 2026
Light
Dark

T20 Worldcup 2024: ಟೀಮ್‌ ಇಂಡಿಯಾ ಹೊಸ ಜೆರ್ಸಿ ಅನಾವರಣ

ಮುಂಬರುವ ಜೂನ್‌ 2ರಿಂದ ಚುಟುಕು ಕ್ರಿಕೆಟ್‌ ಸಮಯ ಟಿ20 ವಿಶ್ವಕಪ್‌ ಟೂರ್ನಿ ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎನಲ್ಲಿ ಆರಂಭಗೊಳ್ಳಲಿದ್ದು, ಇದಕ್ಕಾಗಿ ಟೀಮ್‌ ಇಂಡಿಯಾದ ಹೊಸ ಜೆರ್ಸಿ ಅನಾವರಣಗೊಂಡಿದೆ.

ಅಡಿಡಾಸ್‌ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼಒಂದು ಜೆರ್ಸಿ, ಒಂದು ದೇಶʼ ಎಂಬ ಬರಹದೊಂದಿಗೆ ಹೊಸ ಜೆರ್ಸಿಯ ವಿಡಿಯೊವನ್ನು ಹಂಚಿಕೊಂಡಿದ್ದು, ಈ ಟ್ವೀಟ್‌ ಅನ್ನು ಬಿಸಿಸಿಐ ಶೇರ್‌ ಮಾಡಿಕೊಂಡಿದೆ.

ಕೇಸರಿ, ಬಿಳಿ, ಹಸಿರು ಬಣ್ಣಗಳ ಕಾಲರ್‌ ಇರುವ ನೀಲಿ ಹಾಗೂ ಕೇಸರಿ ಬಣ್ಣದ ಜೆರ್ಸಿ ಇದಾಗಿದ್ದು, ಜೆರ್ಸಿ ಲುಕ್‌ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಏರ್ಪಟ್ಟಿವೆ. ಹೆಚ್ಚಾಗಿ ಈ ಜೆರ್ಸಿ ಬಗ್ಗೆ ನೆಗೆಟಿವ್‌ ಕಾಮೆಂಟ್‌ಗಳೇ ಹರಿದಾಡುತ್ತಿವೆ.

ಟೀಮ್‌ ಇಂಡಿಯಾ ಜೂನ್‌ 5ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಐರ್ಲೆಂಡ್‌ ವಿರುದ್ಧ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಜೂನ್‌ 9ರಂದು ನಡೆಯಲಿದೆ.

Tags:
error: Content is protected !!