Mysore
25
overcast clouds

Social Media

ಭಾನುವಾರ, 03 ಮೇ 2026
Light
Dark

ಕುಡಿಯುವ ನೀರಿಗೆ ವಿಷ ಬೆರೆಸಿ ಪತ್ನಿ, ಮಕ್ಕಳ ಹತ್ಯೆ

ಮಂಡ್ಯ: ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನರಸಿಂಹ ಎಂಬ ಆರೋಪಿ ಕುಡಿಯುವ ನೀರಿಗೆ ವಿಷ ಬೆರೆಸಿದ್ದು ಪತ್ನಿ ಹಾಗೂ ಇಬ್ಬಳು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಆರೋಪಿ ನರಸಿಂಹ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ್ದು, ಪತ್ನಿ ಕೀರ್ತನಾ (23), ಮಕ್ಕಳಾದ ಜಯಸಿಂಹ (4) ಹಾಗೂ ರಿಷಿಕಾ (1) ಮೃತಪಟ್ಟಿದ್ದಾರೆ. ಇನ್ನು ತಾನೂ ಸಹ ಈ ನೀರನ್ನು ಸೇವಿಸಿದ್ದು ಅಸ್ವಸ್ಥಗೊಂಡ ಆತನನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ನರಸಿಂಹ ಹಾಗೂ ಕೀರ್ತನಾ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಕೀರ್ತನಾ ಪ್ರಶ್ನೆ ಎತ್ತಿದ್ದಾರೆ. ಈ ವಿಷಯಕ್ಕೆ ದಂಪತಿಗಳ ನಡುವೆ ಜಗಳ ನಡೆದಿದ್ದು, ಪತಿ ನೀರಿಗೆ ಕ್ರಿಮಿನಾಶಕ ಬೆರೆಸಿದ್ದಾನೆ. ಆರೋಪಿ ಕಟಿಂಗ್‌ ಶಾಪ್‌ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿದ್ದು, ನಾಗಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!