Mysore
27
few clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಇದೇ ಕಾರಣಕ್ಕಾಗಿ ನಾನು ಸ್ಟಾರ್‌ ಚಂದ್ರು ಪರ ಪ್ರಚಾರಕ್ಕೆ ಬಂದೆ: ಮಂಡ್ಯದಲ್ಲಿ ಡಿಬಾಸ್‌ ಫಸ್ಟ್‌ ರಿಯಾಕ್ಷನ್‌!

ಮಂಡ್ಯ: ಸ್ಯಾಂಡಲ್‌ವುಡ್‌ ಸ್ಟಾರ್‌ ದರ್ಶನ್‌ ಅವರು ಇಂದು ಮಂಡ್ಯ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಭರ್ಜರಿ ಮತ ಭೇಟೆಯಾಡಿದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದು ಮೈತ್ರಿ ಅಭ್ಯರ್ಥಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಸುಮಲತಾ ಎಲ್ಲಿಯೂ ಯಾವುದೇ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಈ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿದ್ದು, ಪ್ರಚಾರದಲ್ಲಿ ಅಚ್ಚರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಸುಮಲತಾ ಹಾಗೂ ಎಚ್ಡಿಕೆ ಅವರು ಕಳೆದ ಚುನಾವಣೆ ವೇಳೆ ವಾಗ್ದಾಳಿಗಳು, ಮನಸ್ಥಾಪಗಳು ಕಂಡು ಬಂದಿತ್ತು. ಈ ಬಾರಿ ಚುನಾವಣೆಯಲ್ಲಿ ಸುಮಲತಾ ಬಿಜೆಪಿಯಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು, ಆದರೆ ಸುಮಲತಾ ಮನವೋಲಿಸಿದ ಬಿಜೆಪಿ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯನ್ನು ನೇಮಕ ಮಾಡಿ ಅಚ್ಚರಿ ಮೂಡಿಸಿತ್ತು. ಇನ್ನು ಕುಮಾರಸ್ವಾಮಿ ಅವರಿಗೆ ಸುಮಲತಾ ಬೆಂಬಲ ನೀಡುತ್ತಾರಾ ಎಂದು ಪ್ರಶ್ನೆಗಳು ಉದ್ಭವಿಸಿದ್ದವು.

ಸುಮಲತಾ ಸದ್ಯ ಯಾವುದೇ ಪ್ರಚಾರಕ್ಕೂ ಹೋಗದೇ ಸುಮ್ಮನಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿತ್ತು. ಇನ್ನು ಸುಮಲತಾರನ್ನು ಅಮ್ಮ ಎಂದೇ ಕರೆಯುವ ನಡ ದರ್ಶನ್‌, ತನ್ನ ತಾಯಿ ಬಾವಿಗೆ ದುಮುಕು ಎಂದರು ಬೀಳುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ಸುಮಲತಾ ಗೆ ಯು ಟರ್ನ್‌ ಹೊಡೆದಿರುವ ದರ್ಶನ್‌ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ತಾವು ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿರುವುದು ರಾಜಕೀಯ ಪಕ್ಷದ ಪರವಾಗಿ ಅಲ್ಲ, ಅಭ್ಯರ್ಥಿಯ ಪರವಾಗಿ ಎಂದಿರುವ ನಟ ದರ್ಶನ್‌, ಮಾಧ್ಯಮದವರು ಏನೇನೋ ಹಾಕಿದ್ರೆ ತುಂಬಾ ಕಷ್ಟ ಅಗುತ್ತೆ. ಹೀಗಾಗಿ ನಾನೇ ಸ್ಪಷ್ಟನೆ ಕೊಡುತ್ತಿದ್ದೇನೆ. ಸುಮಲತಾಗೆ ಟಿಕೆಟ್‌ ಸಿಗದಿದ್ದರೇ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂದು ಉದಯ್‌ ಗೌಡ್ರು ಕೇಳಿದ್ದರು. ಮೊದಲು ಅವರು ಕರೆದಿದ್ದರು ಎನ್ನುವ ಕಾರಣಕ್ಕಾಗಿ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್‌ ಚಂದ್ರು ಅವರಿಗೆ ಮತ ನೀಡುವ ಮೂಲಕ ಉದಯ್‌-ನರೇಂದ್ರ ಕೈಗಳನ್ನು ಬಲಪಡಿಸಿ ಎಂದು ಡಿ ಬಾಸ್‌ ಮತಯಾಚನೆ ಮಾಡಿದರು.

Tags:
error: Content is protected !!