Mysore
31
scattered clouds

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಬಿಳಿಗಿರಿರಂಗನ ಬೆಟ್ಟ ಅರಣ್ಯಕ್ಕೆ ಬೆಂಕಿ: ನಂದಿಸುವ ಪ್ರಯತ್ನ ನಡೆಸಿರುವ ಸಿಬ್ಬಂದಿ

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತಾರಣ್ಯ ಬೈಲೂರು ವನ್ಯಜೀವಿ ವಲಯದದಲ್ಲಿ ಶನಿವಾರ ( ಮಾರ್ಚ್‌ 30 ) ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ ಸಿಬ್ಬಂದಿ ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಿಡಿಗೇಳಿಗಳು ಬೈಲೂರು ವನ್ಯಜೀವಿ ವಲಯದ ಕೌಳಿಹಳಿ ಅಣೆಕಟ್ಟಿನ ಬಳಿಯ ರೇಖೆಗೆ ಬೆಂಕಿ ಹಚ್ಚಿದ್ದಾರೆ ಎಂದು ಬಿಆರ್‌ಟಿ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ತಿಳಿಸಿದ್ದಾರೆ.

ಡ್ರೋನ್‌ ತಂಡದೊಂದಿಗೆ 60 ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಂಕಿ ನಂದಿಸುತ್ತಿದ್ದಾರೆ. ಅರಣ್ಯ ಪ್ರದೇಶವು ಕಡಿದಾಗಿದ್ದು, ಇಳಿಜಾರಾಗಿದೆ. ಬೆಂಕಿ ನಂದಿಸಿದ ಬಳಿಕ ಅರಣ್ಯ ನಷ್ಟದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಡಿಸಿಎಫ್‌ ಹೇಳಿದ್ದಾರೆ.

Tags:
error: Content is protected !!