Mysore
24
overcast clouds

Social Media

ಬುಧವಾರ, 17 ಜೂನ್ 2026
Light
Dark

ಹೈ ಸೆಕ್ಯೂರಿಟಿ ನಡುವೆ ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಸ್ಪರ್ಶಿಸಿದ ಫ್ಯಾನ್‌!

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ಮಾ.೨೫) ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಪಂಜಾಬ್‌ ಕಿಂಗ್ಸ್‌ ತಂಡದ ವಿರುದ್ಧ 4 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನಾ ಚೇಸಿಂಗ್‌ ವೇಳೆ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿಗೆ ತಮ್ಮ ಅಭಿಮಾನಿಯೊಬ್ಬರು ಎದುರಾದ ಘಟನೆ ಮೈದಾನದಲ್ಲಿಯೇ ನಡೆದಿದೆ.

ಕಿಂಗ್‌ ಕೊಹ್ಲಿ ಬ್ಯಾಟಿಂಗ್‌ ಬರುವ ವೇಳೆ ಭದ್ರತಾ ವೈಫಲ್ಯ ಉಂಟಾಗಿದೆ. ಎಲ್ಲಿಂದಲೋ ಓಡಿ ಬಂದ ಕೊಹ್ಲಿ ಅಭಿಮಾನಿ ದಿಢೀರನೇ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಕಾಲು ಹಿಡಿದಿದ್ದಾನೆ. ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದಂತೆ ಕ್ರೀಸ್​ಗೆ ನುಗ್ಗಿದ್ದ ಅಭಿಮಾನಿ ಕಾಲು ಮುಟ್ಟಿ ಸಂಭ್ರಮಿಸಿದ್ದಾನೆ. ಬಳಿಕ ಹೈ ಸೆಕ್ಯೂರಿಟಿ ನಡುವೆಯೂ ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿಯನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿ ವಶಕ್ಕೆ ಪಡೆದ ಘಟನೆ ನಡೆದಿದೆ.

https://x.com/mufaddal_vohra/status/1772292566425252256?s=20

Tags:
error: Content is protected !!