Mysore
20
broken clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಮೈಸೂರು| ಫ್ಲೆಕ್ಸ್ ವಿಚಾರಕ್ಕೆ ಗಲಾಟೆ: ಮುಸ್ಲಿಂ ವ್ಯಕ್ತಿಯ ಬರ್ಬರ ಹತ್ಯೆ

ಮೈಸೂರು: ಫ್ಲೆಕ್ಸ್‌ ವಿಚಾರಕ್ಕೆ ಗಲಾಟೆ ನಡೆದು, ನಗರ ಪಾಲಿಕೆ ಸದಸ್ಯದ ಸಹೋದರನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತದ ಸಮೀಪದಲ್ಲಿ ನಡೆದಿದೆ.

ನಗರ ಪಾಲಿಕೆ ಸದಸ್ಯ ನಯಾಜ್‌ ಪಾಷಾ ಸಹೋದರ ಅಕ್ಮಲ್‌ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಮೂರು ಬೈಕ್‌ನಲ್ಲಿ ಸುಮಾರು ಆರು ಜನರಿಂದ ಈ ಕೃತ್ಯ ನಡೆದಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದಕ್ಕೆ ಫ್ಲೆಕ್ಸ್‌ ಅಳವಡಿಸಿದ್ದನು ಪ್ರಶ್ನಿಸಿ ಅಲ್ತಾಫ್‌ ಖಾನ್‌ ಪಾಲಿಕೆಗೆ ಅಕ್ಮಲ್‌ ವಿರುದ್ಧ ದೂರು ನೀಡಿದ್ದರು. ಈ ನಡುವೆ ಅಲ್ತಾಫ್ ಖಾನ್ ವಿರುದ್ಧ ವೀಡಿಯೋ ಮಾಡಿ ಅಕ್ಮಲ್ ಹರಿಹಾಯ್ದಿದ್ದ. ಇದರಿಂದ ಕ್ರೋದಗೊಂಡು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಸಂಬಂಧ ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಹಾಗೂ ಮೈಸೂರು ಪಾಲಿಸ ಸದಸ್ಯ ಬಷೀರ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!