Mysore
25
scattered clouds

Social Media

ಮಂಗಳವಾರ, 05 ನವೆಂಬರ್ 2024
Light
Dark

ಫೆ.7 ರಂದು ಮಂಡ್ಯದಲ್ಲಿಲ್ಲ ಬಂದ್; ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಸಮಾನ ಮನಸ್ಕರ ವೇದಿಕೆ

ಮಂಡ್ಯ: ಜಿಲ್ಲೆಯ ಕೆರಗೋಡು ಹನುಮ ಧ್ವಜ ತೆರವು ಪ್ರಕರಣ ವಿವಾದ ಹಿನ್ನೆಲೆಯಲ್ಲಿ ನಾಳೆ ( ಫೆಬ್ರವರಿ 7 ) ಮಂಡ್ಯ ಬಂದ್‌ಗೆ ಕರೆ ನೀಡಲಾಗಿತ್ತು, ಆದರೆ ಇಂದು ಸಮಾನ ಮನಸ್ಕರ ವೇದಿಕೆಯು ಬಂದ್ ಅನ್ನು ಹಿಂಪಡೆದುಕೊಂಡಿದೆ. ಮಂಡ್ಯ ಬಂದ್ ಅನ್ನು ವಾಪಾಸ್ ಪಡೆಯುವಂತೆ ಜಿಲ್ಲಾಡಳಿತ ಮಾಡಿದ್ದ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡು ಈ ಸಂಬಂಧ ಜಿಲ್ಲಾಧಿಕಾರಿಗಳು ಸೇರಿದಂತೆ ವೇದಿಕೆಯ ನಾಯಕರು ಸಂಧಾನ ಸಭೆ ನಡೆಸಿದ್ದು, ಸಭೆಯಲ್ಲಿ ಬಂದ್ ಹಿಂಡೆಯಲಾಗಿದೆ.

ಕೆರಗೋಡಿನ ಹನುಮ ಧ್ವಜ ತೆರವು ವಿವಾದದ ನಂತರ ಧರ್ಮದಂಗಲ್ ಆರಂಭವಾಗಿದ್ದು , ಹನುಮ ಧ್ವಜವನ್ನು ಮತ್ತೆ ಹಾರಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಫೆ.9 ರಂದು ಬಂದ್ ಮಾಡುವುದಾಗಿ ತಿಳಿಸಿದ್ದರು. ಸಮಾನ ಮನಸ್ಕರ ವೇದಿಕೆಯು ಇದನ್ನು ವಿರೋಧಿಸಿ ಫೆ.7ಕ್ಕೆ ಬಂದ್ ಮಾಡುವುದಾಗಿ ಹೇಳಿತ್ತು. ಈ ಬಂದ್‌ಗೆ ಸಿಐಟಿಯು, ಪ್ರಗತಿಪರರು, ದಲಿತ ಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ಸಭೆಯ ನಂತರ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಬಂದ್ ವಾಪಾಸ್ ಪಡೆಯಲಾಗಿದೆ.

ಜಿಲ್ಲಾಡಳಿತದ ಮನವಿಯಂತೆ ಬಂದ್‌ನಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಅಂಗಡಿ ಮುಂಗಟ್ಟುಗಳ ವ್ಯಾಪಾರ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ಮಂಡ್ಯ ಜಿಲ್ಲಾಧಿಕಾರಿಯಾಗಿರುವ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ರವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.

ಇವುಗಳ ಮಧ್ಯೆ ಫೆ.9ರಂದು ಹಿಂದುಪರ ಸಂಘಟನೆಯು ನೀಡಿರುವ ಬಂದ್‌ಗೆ ಅವಕಾಶ ನೀಡದಂತೆ ಸಮಾನ ಮನಸ್ಕರ ವೇದಿಕೆಯು ಜಿಲ್ಲಾಡಳಿತಕ್ಕೆ ಮನವಿ ಕೋರಿದೆ. ನಾಳೆ ಬಂದ್ ಇಲ್ಲದಿರುವ ಕಾರಣ ಸಾರ್ವಜನಿಕರಲ್ಲಿ ಶಾಂತಿ ಮನೋಭಾವನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಹಿಂದೂ ಪರ ಸಂಘಟನೆಗಳು ಫೆ.9 ರ ಬಂದ್‌ಗೆ ಏನು ತೀರ್ಮಾನಿಸುತ್ತಾರೆಂದು ನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ