Mysore
28
haze

Social Media

ಸೋಮವಾರ, 02 ಮಾರ್ಚ್ 2026
Light
Dark

ಮೈಸೂರು: ಬರ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಬೇಸರ

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿ ಬೇಸರ ಹೊರಹಾಕಿದರು.

ಎರಡು ತಿಂಗಳ ಹಿಂದೆಯೇ ನಾನೇ ಖುದ್ದಾಗಿ ಭೇಟಿ ನೀಡಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆ. ಬೇಗ ಪರಿಹಾರದ ಹಣ ಕೊಡಿ ಎಂದು ಹೇಳಿದ್ದೆವು. ಈ ಕುರಿತಾಗಿ ಒಮ್ಮೆ ಸಭೆ ಕರೆದು ಮುಂದೂಡಿದರು.‌ ಅಲ್ಲದೇ ಪ್ರಧಾನಿ ಬೆಂಗಳೂರಿಗೆ ಬಂದಾಗಲೂ ಬರ ಪರಿಹಾರ ನೀಡುವಂತೆ ಹೇಳಿದ್ದೆ ಎಂದೂ ಸಹ ಹೇಳಿದರು.

ಸದ್ಯಕ್ಕೆ ನಾವೇ ಬರ ನಿರ್ವಹಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ ಸಿದ್ದರಾಮಯ್ಯ ನಾವು ಈವರೆಗೆ 2000 ಕೋಟಿ ರೂ. ಖರ್ಚು ಮಾಡಿದ್ದೇವೆ, ಬರ ಪರಿಹಾರಕ್ಕೆ ಈಗ 550 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ರೈತರಿಗೆ ಮುಂದಿನ ವಾರ ಮೊದಲ ಕಂತಿನ ಹಣವನ್ನು ಹಾಕುತ್ತೇವೆ ಎಂದು ಭರವಸೆಯನ್ನೂ ಸಹ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!