Mysore
28
broken clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಲೋಕಸಭಾ ಚುನಾವಣೆ ಮೈತ್ರಿ, ಪಕ್ಷದ ನಾಯಕರೊಂದಿಗೆ ಹೆಚ್‌ಡಿಕೆ ಸಮಾಲೋಚನೆ: ಇಂದು ಸುದ್ದಿಗೋಷ್ಠಿ!

ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಿಕ್ಕಮಂಗಳೂರಿನ ರಿಸಲ್ಟ್ ನಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ನಾಯಕರುಗಳೊಂದಿಗೆ ಸಮಾಲೋಚನೆ ನಡೆಸಿದ್ದು ಇದೀಗ ಇಂದು ಬೆಳಿಗ್ಗೆ 9:00 ಗಂಟೆಗೆ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರಿನ ಹನಿಡೈಯೋ ಹೋಟೆಲ್ ರೆಸಾರ್ಟ್ ನಲ್ಲಿ ಎಚ್. ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈಗಾಗಲೇ ಮಂಡ್ಯ ಮೈಸೂರು ಜೆಡಿಎಸ್ ನಾಯಕರ ಜೊತೆ ಎಚ್ ಡಿ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದು ಮಂಡ್ಯ ಮೈಸೂರು ಲೋಕಸಭಾ ಕ್ಷೇತ್ರದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

ರೆಸಾರ್ಟ್ ನಲ್ಲಿ ಕುಮಾರಸ್ವಾಮಿ ವಾಸ್ತವ್ಯಹೂಡಿ ಚರ್ಚೆ ನಡೆಸಿದ್ದಾರೆ. ಎನ್ನಲಾಗುತ್ತಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಚಿಕ್ಕಮಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ನಾಯಕರು ವಾಸ್ತವ ಹುಟ್ಟಿದ್ದು ಲೋಕಸಭೆ ಚುನಾವಣೆ ತಯಾರಿಗಾಗಿ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!