Mysore
25
light rain

Social Media

ಶುಕ್ರವಾರ, 14 ಆಗಸ್ಟ್ 2026
Light
Dark

6 ರಿಂದ 8ನೇ ತರಗತಿ ಪಠ್ಯಕ್ಕೆ ಭಗವದ್ಗೀತೆ ಸೇರ್ಪಡೆ

ಅಹಮದಾಬಾದ್‌ :  2024ನೇ  ಶೈಕ್ಷಣಿಕ ವರ್ಷದಿಂದ 6 ರಿಂದ 8 ನೇ ತರಗತಿಗಳ ಪಠ್ಯಕ್ರಮಕ್ಕೆ ಸೇರಿಸಲು ‘ಭಗವದ್ಗೀತೆ’ ಕುರಿತು ನೂತನ ಪಠ್ಯಪುಸ್ತಕವೊಂದನ್ನು ಗುಜರಾತ್‌ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.

ಈಗಿರುವ ಶಾಲಾ ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ 6 ರಿಂದ 8ನೇ ತರಗತಿ ಮಕ್ಕಳು ಇನ್ನು ಭಗವದ್ಗೀತೆಯ ಸಾರಾಂಶವನ್ನೊಳಗೊಂಡ ಮೊದಲ ಭಗವದ್ಗೀತೆ ಪಠ್ಯಪುಸ್ತಕವನ್ನು ಹೆಚ್ಚುವರಿ ಅಧ್ಯಯನ ಮಾಡಲಿದ್ದಾರೆ.

ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಅರ್ಜುನ ಮತ್ತು ಭಗವಾನ್‌ ಕೃಷ್ಣನ ನಡುವೆ ಭಗವದ್ಗೀತೆ ಸಂಭಾಷಣೆ ನಡೆದ ದಿನವೆಂದು ಗುರುತಿಸಲಾಗುವ ‘ಗೀತಾ ಜಯಂತಿ’ಯಂದೇ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಪ್ರಫುಲ್‌ ಕನ್ಶೇರಿಯಾ ‘ರಾಷ್ಟ್ರೀಯ ಶಿಕ್ಷಣ ನೀತಿ – 2020 (ಎನ್‌ಇಪಿ) ಚೌಕಟ್ಟಿನಡಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

ಇನ್ನು 9 ರಿಂದ 12ನೇ ತರಗತಿಗೆ ಭಗವದ್ಗೀತೆಯ ಮುಂದುವರಿದ ಭಾಗ ಅಥವಾ ‘ಭಗವದ್ಗೀತೆ’ಯ 2ನೇ ಭಾಗವನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!