Mysore
29
clear sky

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಮಗನನ್ನು ಗೆಲ್ಲಿಸಲು ಸಿದ್ದರಾಮಯ್ಯ ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ; ಲೆಹರ್‌ ಸಿಂಗ್‌ ಆರೋಪ

ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿರುವ ಸಂಸತ್‌ ಭವನದ ಮೇಲಿನ ದಾಳಿ ಕುರಿತು ವಿವಿಧ ರಾಜಕಾರಣಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಸಂಸತ್‌ ಪ್ರವೇಶಿಸಲು ಆರೋಪಿಗಳು ಪ್ರತಾಪ್‌ ಸಿಂಹ ಕಚೇರಿಯಿಂದ ಪಾಸ್‌ ಪಡೆದಿರುವ ಕಾರಣ ಕಾಂಗ್ರೆಸ್ಸಿಗರು ಪ್ರತಾಪ್‌ ಸಿಂಹ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಾಪ್‌ ಸಿಂಹ ಪರ ಬ್ಯಾಟ್‌ ಬೀಸಿದ್ದಾರೆ.

ಇದೀಗ ರಾಜ್ಯಸಭಾ ಸದಸ್ಯ, ಬಿಜೆಪಿಯ ಲೆಹರ್‌ ಸಿಂಗ್‌ ಸಿರೋಯಾ ಈ ಕುರಿತು ಪ್ರತಿಕ್ರಿಯಿಸಿದ್ದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಲೆಹರ್‌ ಸಿಂಗ್‌ ಸಿರೋಯಾ ಪ್ರತಾಪ್‌ ಸಿಂಹ ಅವರನ್ನು ಟ್ರ್ಯಾಪ್‌ ಮಾಡಲಾಗಿದೆ, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಸ್ಪರ್ಧೆ ಮಾಡಲಿದ್ದಾರೆ, ಹೀಗಾಗಿ ಪ್ರತಾಪ್‌ ಸಿಂಹ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಲೆಹರ್ ಸಿಂಗ್‌ ಸಿರೋಯಾ ಸಿದ್ದರಾಮಯ್ಯ ಅರ್ಬನ್‌ ನಕ್ಸಲರನ್ನು ಬೆಳೆಸುತ್ತಿದ್ದಾರೆ, ಭಾರತ್‌ ಜೋಡೊ ಯಾತ್ರೆಯಲ್ಲಿ ಸಹ ಆ ಅರ್ಬನ್‌ ನಕ್ಸಲರು ಭಾಗಿಯಾಗಿದ್ದರು ಎಂದರು. ಸಂಸತ್‌ನಲ್ಲಿ ಗಲಾಟೆಯಾಗಿ ಕೇವಲ 15 ನಿಮಿಷ ಕಳೆಯುವಷ್ಟರಲ್ಲಿಯೇ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದ್ದಾರೆ. ಪ್ರತಾಪ್‌ ಸಿಂಹ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!