Mysore
24
few clouds

Social Media

ಸೋಮವಾರ, 25 ಮೇ 2026
Light
Dark

ಮೇಲ್ಮನವಿ ವಾಪಸ್‌ಗೆ ಹೈಕೋರ್ಟ್‌ ಅನುಮತಿ: ಡಿಕೆಶಿಗೆ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ವಿಚಾರದ ಕುರಿತಾಗಿ ಇಂದು ಬೆಳಗ್ಗಿನಿಂದ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು.

ಡಿಕೆಶಿ ಕೇಸ್‌ ಸಂಬಂಧ ವಿಚಾರಣೆ ನಡೆದಿದ್ದು, ಸದ್ಯ ಕೋರ್ಟ್‌ ವಿಚಾರಣೆ ಮುಗಿದಿದ್ದು, ಕೇಸ್‌ಗೆ ಸಂಬಂಧಪಟ್ಟಂತೆ ಡಿಕೆಶಿ ಪರ ವಕೀಲರಿಗೆ ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ ನೀಡಿದೆ. ಇದಲ್ಲದೇ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯನ್ನು ಡಿಕೆಶಿ ಪರ ವಕೀಲರು ಹಿಂಪಡೆದಿದ್ದಾರೆ.

ಹೈಕೋರ್ಟ್‌ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ನಂತರ ಈ ಬಗ್ಗೆ ಮಾತನಾಡುತ್ತೇನೆ.  ನಾನು ಯಾವುದೇ ತಪ್ಪು ಮಾಡಿಲ್ಲ.ನಾನು ಮಾಡಿರುವ ಕೆಲಸ ನನ್ನ ಪಾರ್ಟಿಗಾಗಿ ಮಾಡಿದ್ದೇನೆ ಎಂದಿದ್ದಾರೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!