Mysore
23
broken clouds
Light
Dark

IPL 2024: ಆಟಗಾರರ ರಿಟೆನ್ಷನ್‌ ಬಳಿಕ ಯಾವ ತಂಡದ ಪರ್ಸ್‌ನಲ್ಲಿ ಹೆಚ್ಚು ಹಣವಿದೆ?

ಮೊನ್ನೆ ( ನವೆಂಬರ್‌ 26) ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಭಾಗವಹಿಸುವ ಫ್ರಾಂಚೈಸಿಗಳಿಗೆ ತಮ್ಮ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಘೋಷಿಸಲು ಕೊನೆಯ ದಿನವಾಗಿತ್ತು. ಅದರಂತೆ ಎಲ್ಲಾ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡಿದ್ದೇವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸಿದ್ದೇವೆ ಎಂಬುದನ್ನು ಘೋಷಿಸಿದವು.

ಅಲ್ಲದೇ ಆಟಗಾರರ ಟ್ರೇಡಿಂಗ್‌ ಸಹ ನಡೆದಿದ್ದು ವಿವಿಧ ತಂಡಗಳು ಬೇರೆ ತಂಡಗಳಲ್ಲಿದ್ದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೆಮರೂನ್‌ ಗ್ರೀನ್‌ ಅವರನ್ನು ಟ್ರೇಡ್‌ ಮಾಡಿಕೊಂಡರೆ, ಮುಂಬೈ ಇಂಡಿಯನ್ಸ್‌ ತಂಡ ಹಾರ್ದಿಕ್‌ ಪಾಂಡ್ಯ ಅವರನ್ನು ಮತ್ತೆ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಇನ್ನು ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಸೇರಿದ ಬೆನ್ನಲ್ಲೇ ಶುಬ್‌ಮನ್‌ ಗಿಲ್‌ ಹೆಗಲಿಗೆ ಗುಜರಾತ್‌ ಟೈಟನ್ಸ್‌ ತಂಡದ ನಾಯಕತ್ವದ ಜವಾಬ್ದಾರಿ ಬಿದ್ದಿದೆ.

ಡಿಸೆಂಬರ್‌ 19ರಂದು ನಡೆಯಲಿರುವ ಹರಾಜಿಗೂ ಮುನ್ನ ಇಷ್ಟೆಲ್ಲಾ ಚಟುವಟಿಕೆಗಳು ನಡೆದಿದ್ದು, ಇದಾದ ಬಳಿಕ ಯಾವ ಫ್ರಾಂಚೈಸಿ ಜೋಳಿಗೆಯಲ್ಲಿ ಎಷ್ಟು ಹಣ ಉಳಿದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಗುಜರಾತ್‌ ಟೈಟನ್ಸ್‌ – 38.15 ಕೋಟಿ ರೂಪಾಯಿಗಳು
ಸನ್‌ ರೈಸರ್ಸ್‌ ಹೈದರಾಬಾದ್‌ – 34 ಕೋಟಿ ರೂಪಾಯಿಗಳು
ಕೊಲ್ಕತ್ತಾ ನೈಟ್‌ ರೈಡರ್ಸ್‌ – 32.7 ಕೋಟಿ ರೂಪಾಯಿಗಳು
ಚೆನ್ನೈ ಸೂಪರ್‌ ಕಿಂಗ್ಸ್‌ – 31.4 ಕೋಟಿ ರೂಪಾಯಿಗಳು
ಪಂಜಾಬ್‌ ಕಿಂಗ್ಸ್‌ – 29.1 ಕೋಟಿ ರೂಪಾಯಿಗಳು
ಡೆಲ್ಲಿ ಕ್ಯಾಪಿಟಲ್ಸ್‌ – 28.95 ಕೋಟಿ ರೂಪಾಯಿಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 23.25 ಕೋಟಿ ರೂಪಾಯಿಗಳು 

ಮುಂಬೈ ಇಂಡಿಯನ್ಸ್‌ – 17.75 ಕೋಟಿ ರೂಪಾಯಿಗಳು 

ರಾಜಸ್ಥಾನ್‌ ರಾಯಲ್ಸ್‌ 14.5 ಕೋಟಿ ರೂಪಾಯಿಗಳು 

ಲಕ್ನೋ ಸೂಪರ್‌ ಜೈಂಟ್ಸ್‌ – 13.15 ಕೋಟಿ ರೂಪಾಯಿಗಳು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ